ಎಷ್ಟು ತಪವನು ಮಾಡಿ ಪಡೆದೆನೋ ನಾ ನಿನ್ನ
ಕಷ್ಟವಾಗಿದೆ ನಿಂದೆ ನುಡಿಯ ಕೇಳುವುದು||ಪ||
ಚೇಷ್ಟೆಯನು ಮಾಡದಿರೋ ಕೃಷ್ಣ ಈ ಪರಿ ಬಹಳ||
ನಿಷ್ಠೂರ ವಚನಗಳ ಆಡುವರು ಜನರು||ಅ.ಪ||
ಕೊಂಡು ಪೋಗಲಿ ಬೆಣ್ಣೆ ಪಾಲು ದಧಿ ಭಾಂಡಗಳ|
ದುಂಡು ನಗು ಮೊಗ ಚೆಲುವ ನಿನ್ನ ಮಗನು|
ಕಂಡರೆಮ್ಮನು ಮೋರೆ ತಿರುವಲೇತಕೆ ಇಂಥಾ|
ಪುಂಡು ಹುಡುಗನೆ ನಿನ್ನ ಮಗನೆಂದು ಜರಿಯುವರು||೧||
ಮುರಳಿ ನಾದವ ಕೇಳಿ ಮರೆತು ಮೇವನು ಎಮ್ಮ
ತುರು ಕರುಗಳೆಲ್ಲ ಬಲು ಕೃಶವಾದುವಮ್ಮ
ಹರಿವ ಯಮುನಾ ಜಲದೋಳ್ ಆದ ಅವಿವೇಕವನು
ಅರುಹಲೆಮ್ಮಯ ಮನವು ಜರಿವುದೆಂದಾಡುವರು||೨||
ಸಂಸಾರ ಮೋಹವನು ಮರೆತು ಎನ್ನಲಿ ಮನದಾ*
ಸಂಶಯವ ಬಿಡಿ ಬಿಡಿರಿ ಪ್ರಸನ್ನರಾಗಿರಿ ಎಂದ
ಧ್ವಂಸವಾಯಿತು ನಮ್ಮ ಅಭಿಮಾನ ಇವ ಚಂದ್ರ
ವಂಶಕೆಂತಪ ಕೀರ್ತಿ ತಂದನೆಂದಾಡುವರು||೩||
ಕಷ್ಟವಾಗಿದೆ ನಿಂದೆ ನುಡಿಯ ಕೇಳುವುದು||ಪ||
ಚೇಷ್ಟೆಯನು ಮಾಡದಿರೋ ಕೃಷ್ಣ ಈ ಪರಿ ಬಹಳ||
ನಿಷ್ಠೂರ ವಚನಗಳ ಆಡುವರು ಜನರು||ಅ.ಪ||
ಕೊಂಡು ಪೋಗಲಿ ಬೆಣ್ಣೆ ಪಾಲು ದಧಿ ಭಾಂಡಗಳ|
ದುಂಡು ನಗು ಮೊಗ ಚೆಲುವ ನಿನ್ನ ಮಗನು|
ಕಂಡರೆಮ್ಮನು ಮೋರೆ ತಿರುವಲೇತಕೆ ಇಂಥಾ|
ಪುಂಡು ಹುಡುಗನೆ ನಿನ್ನ ಮಗನೆಂದು ಜರಿಯುವರು||೧||
ಮುರಳಿ ನಾದವ ಕೇಳಿ ಮರೆತು ಮೇವನು ಎಮ್ಮ
ತುರು ಕರುಗಳೆಲ್ಲ ಬಲು ಕೃಶವಾದುವಮ್ಮ
ಹರಿವ ಯಮುನಾ ಜಲದೋಳ್ ಆದ ಅವಿವೇಕವನು
ಅರುಹಲೆಮ್ಮಯ ಮನವು ಜರಿವುದೆಂದಾಡುವರು||೨||
ಸಂಸಾರ ಮೋಹವನು ಮರೆತು ಎನ್ನಲಿ ಮನದಾ*
ಸಂಶಯವ ಬಿಡಿ ಬಿಡಿರಿ ಪ್ರಸನ್ನರಾಗಿರಿ ಎಂದ
ಧ್ವಂಸವಾಯಿತು ನಮ್ಮ ಅಭಿಮಾನ ಇವ ಚಂದ್ರ
ವಂಶಕೆಂತಪ ಕೀರ್ತಿ ತಂದನೆಂದಾಡುವರು||೩||
ಇದು ಯಾರ ರಚನೆ ಎಂಬುದು ಗೊತ್ತಾಗಲಿಲ್ಲ. ಏಕೆಂದರೆ ಯಾವುದೇ ಅಂಕಿತ ಸ್ಪಷ್ಟವಾಗಿಲ್ಲ.
ReplyDeleteಅಥವ ನಿಮ್ಮದೇ ರಚನೆಯಾಗಿದ್ದರೆ "ಸ್ವರ್ಣ ಕೃಪಕರ" ಅಂತ ಅಂಕಿತ ಹಾಕಿಬಿಡಿ.
:)...ಇದು ಬಹುಶ ಪ್ರಸನ್ನ ವೆಂಕಟ ಎಂಬ ಅಂಕಿತದಲ್ಲಿ ಬರೆಯುತ್ತಿದ್ದ
ReplyDeleteದಾಸರೊಬ್ಬರ ರಚನೆ ಸರ್. ಮಹಿಪತಿದಾಸರಿರಬಹುದು..ನಂಗೂ ಸರಿಯಾಗಿ ತಿಳಿದಿಲ್ಲ
ಹುಡುಕುತ್ತೇನೆ
ಧನ್ಯವಾದಗಳು
ಸ್ವರ್ಣಾ
ಪ್ರಸನ್ನವೆಂಕಟ ದಾಸರು ಪ್ರಸನ್ನ ವೆಂಕಟ ಎಂಬ ಅಂಕಿತದಲ್ಲಿ ಬರೆದಿದ್ದರೆ.
ReplyDeleteಬಹುಶ ಇದು ಅವರ ರಚನೆ ಇರಬಹುದು.
http://www.prasannavenkatadasaru.org/compositions.html
ಹೀಗೇ ಬ್ಲಾಗ್ ಲೋಕಸಂಚಾರ ಮಾಡುತ್ತಾ ನಿಮ್ಮ ಈ ಬರಹಕ್ಕೆ ಬಂದು ಒಂದುಕ್ಷಣ ಅಚ್ಚರಿಗೊಂಡು ನಿಂತೆ. ಇಷ್ಟು ಸೊಗಸಾದ ನನಗೆ ಸುಪರಿಚಿತವಾದ ಈ ರಚನೆ ಇಲ್ಲಿ ಕಂಡು ತುಂಬಾ ಸಂತಸವಾಯಿತು. ಹಾಗೆಯೇ ಇದರ ಕರ್ತೃತ್ವದ ಬಗೆಗೆ ಇಲ್ಲಿ ಚರ್ಚೆ ನಡೆದದ್ದೂ ಕಂಡು ಅದಕ್ಕೆ ಉತ್ತರಿಸುತ್ತಿದ್ದೇನೆ.
Deleteಈ ಸುಂದರವಾದ ದೇವರನಾಮ ಶ್ರೀ ವಿದ್ಯಾಪ್ರಸನ್ನತೀರ್ಥರದ್ದು. ಇವರು ಶ್ರೀ ವ್ಯಾಸರಾಜರ ಪರಂಪರೆಯಲ್ಲಿ ಆಗಿಹೋದ ಯತಿಗಳು. "ಪ್ರಸನ್ನ" ಅಂಕಿತವಿಟ್ಟುಕೊಂಡು ಇವರು ಅನೇಕ ಸೊಗಸಾದ ಭಾವಗೀತೆಯಂಥ ದೇವರನಾಮಗಳನ್ನು ರಚಿಸಿದ್ದಾರೆ.
ದಾಸ ಸಾಹಿತ್ಯಕ್ಕೆ ವಿದ್ಯಾಪ್ರಸನ್ನರ ಕೊಡುಗೆ ಬಹು ವಿಶಿಷ್ಟವಾದದ್ದು. ಶ್ರೀಪಾದರಾಜ-ವ್ಯಾಸರಾಜ-ವಾದಿರಾಜ-ಪುರಂದರ-ಕನಕರ ದಾಸಪರಂಪರೆಯಲ್ಲೇ ಬಂದರೂ, ಪಾಶ್ಚಾತ್ಯ ಸಾಹಿತ್ಯದ ರಮ್ಯತೆ ಗೇಯತೆಗಳನ್ನೂ ಮೈಗೂಡಿಸಿಕೊಂಡ ಹೊಸತನವೇ ಪ್ರಸನ್ನ ತೀರ್ಥರ ಕೃತಿಗಳ ವೈಶಿಷ್ಟ್ಯ. ಕಲ್ಪನೆಯ ಉತ್ಕೃಷ್ಟತೆ, ಅನುಭಾವ, ವಸ್ತು-ವಿಷಯಗಳ ಹರಹು, ಗೇಯತೆ, ರಮ್ಯತೆಗಳ ಸೊಂಪು ಇವುಗಳನ್ನು ಓದಿ, ಹಾಡಿ, ಕೇಳಿ ಅನುಭವಿಸುವುದೇ ಸೊಗಸು.
ಇವರ ಬಗ್ಗೆ ನನ್ನದೊಂದು ಲೇಖನ http://nannabaraha.blogspot.in/2008/12/blog-post.html ಇಲ್ಲಿದೆ. ಸಮಯವಾದಾಗ ಓದಿ.
ತುಂಬಾ ತುಂಬಾ ಧನ್ಯವಾದಗಳು.
Deleteಭೇಟಿಗಾಗಿ ಮತ್ತು ಮಾಹಿತಿಗಾಗಿ