Thursday, April 26, 2012

ಕಾಲೇಜಿನ ಮೊದಲ ನಗು

ಆ ದಿನ ಮಾತು ಮುಂದುವರೆಸದ ಬಗ್ಗೆ ನನಗಾವ ಬೇಜಾರಿರಲಿಲ್ಲ. ಅಷ್ಟರಲ್ಲಿ ನಮ್ಮ ಹತ್ತನೇ ತರಗತಿ ಪರೀಕ್ಷೆ ಶುರುವಾಗಿ ಅವನ ವಿಷಯ ಬದಿಗೆ ಸರಿಯಿತು. ಪರೀಕ್ಷೆ  ಚೆನ್ನಾಗೇ ಬರೆದೆ.

ರಜೆ ಆರಂಭವಾಗಿ ನಾ  ಊರೂರು ಸುತ್ತುತ್ತಿದ್ದಾಗ   ಫಲಿತಾಂಶ ಬಂತು.
ಪರವಾಗಿಲ್ಲ ಅನ್ನೋ ಅಂತ ಅಂಕಗಳೂ  ಬಂತು.  ಬಂದ ದಿನ ಅವನ ನೆನಪಾಗಿತ್ತೇನೋ?
ಹತ್ತಿರದಲ್ಲೇ ಇದ್ದ ಕಾಲೇಜಿಗೆ ಗೆಳತಿಯರೊಂದಿಗೆ ಸೇರಿಕೊಂಡೆ.  ಕೆಲದಿನ ಅವನಿಗೆ ಫಲಿತಾಂಶ
ತಿಳಿಸೋಣ ಅನ್ನುವ ಯೋಚನೆ ಕಾಡಿತ್ತು. ಹೇಗೆ ತಿಳಿಸೋದು? ಅವನ ಕಾಲೇಜಿಗೆ ಏನಂಥ ಹೋಗೋದು?
ನನ್ನ ಕೆಲವು ಗೆಳತಿಯರು ಅಲ್ಲೂ ಸೇರಿದ್ದರು, ಆದರೆ ಅವರನ್ನು ನೋಡಲು ಹೋಗಿ ಅವನನ್ನ ಪತ್ತೆ ಮಾಡೋದು ಹೇಗೆ?
ನನ್ನ ಗೆಳತಿಯರನ್ನ ಅವನ ಬಗ್ಗೆ ಕೇಳೋದು ಹೇಗೆ? ಕಾಲೇಜಿನಲ್ಲಿ ಅವ ನನ್ನ ಮಾತಾಡಿಸದಿದ್ದರೆ?
ಪ್ರಶ್ನೆಗಳ ಸರಮಾಲೆ ದೊಡ್ಡದಾದಂತೆ ನನ್ನ ಯೋಚನೆ ಮಾಯವಾಯಿತು.

ಸ್ವಲ್ಪ ದಿನಗಳ ನಂತರ ಕಾಲೇಜು ಮುಗಿಸಿ ಮನೆಗೆ ಹೋಗುತ್ತಿದ್ದಾಗ ಸಿಕ್ಕ.
"ಏನು ಜಾಸ್ತಿ ತೆಗಿತಿಯ ಅಂದ್ಕೊಂಡಿದ್ದೆ?"  ಪುಲ್ಲಿಂಗ ಹುಟ್ಟಿದಾಗಲೇ ಪ್ರಶ್ನೆಗಳೂ ಹುಟ್ಟಿದವೇನೋ?
"ಹಾಂ" ಸ್ತ್ರೀಗೂ submissionಗೂ ಬಿಡಿಸಲಾಗದ ನಂಟು .
"ಏನು ಕಾಲೇಜ್ ಗೆ ಸೇರಿದ ಮೇಲೆ ಫುಲ್  ಸೈಲೆಂಟಾ?,ನಮ್ಮ ಕಾಲೇಜಿನಲ್ಲಿ ನೋಟ್ಸ್ ಚೆನ್ನಾಗಿ ಕೊಡ್ತಾರೆ. ಕೊಡ್ತೀನಿ " ನಕ್ಕ.
ನಾ ಮಂದಹಾಸ ಮುಗಿಸಿ ಲೋಕಕ್ಕೆ ಮರಳುವಷ್ಟರಲ್ಲಿ ಅವ ಗಾಡಿ ಸ್ಟಾರ್ಟ್ ಮಾಡಿ ನಡೆದಾಗಿತ್ತು.

"बड़े अच्छे लगते हैं,
यह धरती, यह रैना और तुम"
**********************************************************************************
 ಇಂದು ಭಾಷ್ಯಕಾರರ ದಿನ. ಶಂಕರ ಜಯಂತಿ.
ಸಾಹಿತ್ಯವನ್ನು, ತನ್ಮೂಲಕ ಬದುಕನ್ನು  ವಿವರಿಸಿದ, ವಿವರಿಸುವ  ಎಲ್ಲ ಗುರುಗಳಿಗೂ ವಂದನೆಗಳು
ಬ್ಲಾಗ್ ಲೋಕದಲ್ಲಿ ಸಾಹಿತ್ಯವನ್ನು ವಿವರಿಸುವ ಬ್ಲಾಗ್ ಎಂದರೆ ನನಗೆ ಮೊದಲು ನೆನಪಾಗೋದು
ಸುನಾಥರ 'ಸಲ್ಲಾಪ'.  ಬೇಂದ್ರೆ ಅಜ್ಜನ ಏಲಾಗೀತದಿಂದ ರಾಮ ರಕ್ಷಾ ಸೋತ್ತ್ರದವರೆಗಿನ ಎಲ್ಲ
ವಿವರಣೆಗಳನ್ನ ನಾನಿಲ್ಲೇ ಓದಿದ್ದು. ಇಲ್ಲಿ ಬರೆಯಲು ಪ್ರೋತ್ಸಾಹಿಸಿದವರಲ್ಲಿ ಮೊದಲಿಗರೂ ಗುರುಗಳು .
ಇಲ್ಲಷ್ಟೇ  ಅಲ್ಲ, ಓದಿದ ಎಲ್ಲ ಬ್ಲಾಗಲ್ಲೂ ತಪ್ಪದೆ ಪ್ರತಿಕ್ರಿಯಿಸಿ ಪ್ರೋತ್ಸಾಹಿಸುವ ಅವರಿಗೆ ವಂದನೆಗಳು .
'ಒಂದು  ವರ್ಣವ ಕಲಿಸಿದಾತ ಗುರು' ಅಂದರಂತೆ ಕುಮಾರ ವ್ಯಾಸರು, ಅಂಥ ಎಲ್ಲ ಗುರುಗಳಿಗೆ
ಸಾಷ್ಟಾಂಗ ಪ್ರಣಾಮಗಳು .

ನೀ ಕಲಿಸಿದ ಪಾಠ ಮರೆಯದಂತೆ ,
ಸತ್ಯ ತೊರೆಯದಂತೆ,
ನಾ ಮೆರೆಯದಂತೆ,
ಸತ್ಯ ಪಥದಲ್ಲಿ ನಡೆವಂತೆ,
ನವನೀತವ ಕಡೆವಂತೆ
ಹರೆಸೆಮ್ಮನು  ಗುರುವೇ.

ಸದಾ, ನಿನ್ನ ಚರಣದೆಲೆಮ್ಮ ಶಿರವಿರಲಿ
ಬದುಕಲದೆಷ್ಟೇ ಬರವಿರಲಿ.


6 comments:

  1. ಕತೆ ಆಸಕ್ತಿಕರವಾಗಿ ಸಾಗಿದೆ.
    ನಿಮ್ಮ ಇಷ್ಟೆಲ್ಲ ಪ್ರಶಂಸೆಗೆ ನಾನು ಅರ್ಹನಲ್ಲ. ನನ್ನಿಂದ ನಿಮಗೆ ಏನಾದರೂ ಪ್ರೇರಣೆ ದೊರೆತಿದ್ದರೆ, ಧನ್ಯೋಸ್ಮಿ!
    ಶಂಕರಜಯಂತಿಯಂದು, ಶಂಕರರ ಕೃಪೆ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸುವೆ.

    ReplyDelete
  2. ಧನ್ಯವಾದಗಳು ಉಮಾ ಮೇಡಂ.
    ಧನ್ಯವಾದಗಳು,ನಿಮ್ಮ ಹಾರೈಕೆ ಇರಲಿ ಗುರುಗಳೇ
    ಸ್ವರ್ಣಾ

    ReplyDelete
  3. ಹೌದು, ವರ್ಣಮಾತ್ರಂ ಕಲಿಸಿದಾತಂ ಗುರು.. ನಮ್ಮದೂ ವಂದನೆಗಳು :)

    ReplyDelete
  4. ಅಂತು ಬಡೆ ಅಚ್ಛೆ ಲಗತೆ ಹೈ ಧಾರವಾಹಿಯ ಟೈಟಲ್ ಸಾಂಗ್ ನೆನಪಾಯಿತು ಅನ್ನಿ.

    ಅಂದ ಹಾಗೆ ನೀವು ಯಾಕಷ್ಟು ಸೈಲೆಂಟು? ಆತ ನಿಮ್ಮ ಮೌನವನ್ನು ಇಷ್ಟಪಟ್ಟ ನಿಜ ಗೆಳೆಯ ಇದ್ದಿರಬಹುದು ಅನಿಸಲು ನನಗೆ ಶುರುವಾಗಿದೆ!

    "ಮೌನಂ ಸಮ್ಮತಿ ಲಕ್ಷಣಂ!"

    --------------------

    ಭಾಷ್ಯಾಕಾರರ ದಿನದಂದು ನಾನೂ ನೆನೆಸ ಬೇಕಾದವರ ಬೃಹದ್ ಪಟ್ಟಿಯಲ್ಲಿ ಸುನಾಥ್ ಅವರೂ ಅಗ್ರ ತಾಂಬೂಲ ಮಾನ್ಯರು.

    ಗುರುವನು ನೆನೆಯದೇ
    ಜಗವನು ಗೆಲ್ಲಲಹುದೇ?

    ನಿಮಗೂ ಮತ್ತು ನಿಮ್ಮ ಬ್ಲಾಗಿಗೂ ಒಳ್ಳೆಯ ಹೆಸರು ಬರಲಿ.

    ಶಂಕರ ಜಯಂತಿಯ ತಡವಾದ ಶುಭಾಶಯಗಳು.

    ReplyDelete
  5. ಧನ್ಯವಾದಗಳು ಬದರಿ ಸರ್.
    ನಾನು ಸೈಲೆಂಟಾ ಗೊತ್ತಿಲ್ಲ ಸರ್.
    ಅದು ಕಥೆ ಮಾತ್ರ , ಆ ವಯಸ್ಸಿನಲ್ಲಿ ಆ ರೀತಿಯ ಸಂಬಧಗಳು ವಿರಳ ಸರ್.
    ಅದಕ್ಕೆ ಈ ವಯಸ್ಸಿನಲ್ಲಿ ನಾನು ಕಲ್ಪಿಸಿ ಬರೆದದ್ದು :)
    ಮೂಲ ಹಾಡು ಸಿನೆಮಾದು ,ಸಿನೆಮಾದ ಹೆಸರು ಬಾಲಿಕ ಬಧು
    ತುಂಬಾ ಹಿಟ್ ಹಾಡು ಅದು.

    ReplyDelete