ಅವನೇಕೆ ನಿಲ್ಲಲಿಲ್ಲ ಎಂಬ ಪ್ರಶ್ನೆ ಬಹುದಿನ ಕಾಡುತ್ತಲೇ ಇತ್ತು.
ಅಷ್ಟರಲ್ಲಿ ನಮ್ಮ ಪರೀಕ್ಷೆ ಶುರುವಾಯಿತು, ಖೋಡಿ ಮನಸಿನ್ನೂ ಸ್ವಲ್ಪ ಹಿಡಿತದಲ್ಲೇ
ಇತ್ತು. ಓದಿ ಪರೀಕ್ಷೆ ಬರೆಯಬೇಕಿತ್ತು, ಅವನ ಪ್ರಶ್ನೆ ಬಹುಶಃ ಮನದ ಮೂಲೆ ಸೇರಿತ್ತು.
ನಮ್ಮ ರಜೆ ಶುರುವಾದ ಮೇಲೆ ಹತ್ತನೇ ತರಗತಿಯ ಪರೀಕ್ಷೆ ಗಳು ಆರಂಭವಾದವು.
ಮತ್ತೆ ಶಾಲೆ ಹತ್ತಿರ ಹೋಗಿ ಅವನ ಕಂಡು ಮಾತಾಡಬೇಕೆಂಬ ಯೋಚನೆ ಬಂದಿತ್ತೇನೋ?
ನೆನಪಿಲ್ಲ. ಆದರೆ ನಾನು ಮತ್ತೆ ಶಾಲೆಯ ಹತ್ತಿರ ಹೋಗಲಿಲ್ಲ, ಇನ್ನೆಲ್ಲೂ ಅವನ ಕಾಣಲಿಲ್ಲ.
ರಜೆಯ ಸ್ವಲ್ಪ ದಿನ ಮನೆಯಲ್ಲಿ ಕಳೆದು, ನಂತರ ನಾ ಲೋಕ ಸಂಚಾರಕ್ಕೆ ಹೊರಟೆ. ನೆಂಟರ ಮನೆಯಲ್ಲಿ
ಅವನ ನೆನಪೆನೂ ಕಾಡಲಿಲ್ಲ. ರಜೆ ಮುಗಿಯುತ್ತಾ ಬರುವಾಗ ಹತ್ತನೇ ತರಗತಿಯ ಫಲಿತಾಂಶ ಬಂತು.
ಆ ದಿನ ನೆನಪಾದದ್ದು ನಿಜ. ಪಾಸಾಗಿರುತ್ತಾನೆ ಆದರೆ ಎಷ್ಟು ಮಾರ್ಕ್ಸ್ ಬಂದಿರಬಹುದು? ಯಾವ ಕಾಲೇಜ್ ಸೇರಬಹುದು?
ಈ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳುವುದು ಕಷ್ಟವಾದರೂ ಅಸಾಧ್ಯವೆನಾಗಿರಲಿಲ್ಲ.
ಸಣ್ಣ ಊರಿನ ಪರಿಚಿತ ವಲಯಗಳೂ ಸಣ್ಣವು. ಊರಿನ ಪ್ರತಿಷ್ಟಿತರ ಮಗನಾದ್ದರಿಂದ ಅವನ ರಿಸಲ್ಟ್ ತಿಳಿಯುವುದೂ ಸುಲಭ.
ಹಾಗೆ ಅವನ ರಿಸಲ್ಟ್ ಗೊತ್ತಾಗಿತ್ತು. ಚೆನ್ನಾಗೇ ತೆಗೆದಿದ್ದ. ನನಗೆ ಸ್ವಲ್ಪ ಹೊಟ್ಟೆ ಕಿಚ್ಚು, ಹೆಣ್ಣಲ್ಲವೇ? ಹಣ ಅಂತಸ್ತಿನಲ್ಲಿ ಮುಂದೆ ಇದ್ದ ಅವ ಓದಿನಲ್ಲಿ ಹಿಂದೆ ಇದ್ದಿದ್ದರೆ, ನಾನು ಮುಂದಿದ್ದರೆ, ಸಮಾನತೆ ಸಾಧಿಸುವುದು ಸುಲಭವಾಗುತ್ತಿತ್ತು. ಆದರೆ ಅವ ಓದಿನಲ್ಲೂ ಮುಂದೆ ಅಥವಾ ಸಮಕ್ಕೇ ಇದ್ದ. ಎಲ್ಲದರಲ್ಲೂ ಮುಂದೆ ಇದ್ದ ಅವ ನಿಂತು ಮಾತಾಡಿದ್ದ ಎಂಬ ಖುಷಿ ಒಂದೆಡೆಯಾದರೆ ಮತ್ತೊಮ್ಮೆ ಹಾಗೆ ಹೊರಟು ಹೋದದ್ದೇಕೆ ಎಂಬ ಪ್ರಶ್ನೆ ಮತ್ತೊಂದೆಡೆ.
ಈ ಎಲ್ಲ ಪ್ರಶ್ನೆ, ಯೋಚನೆ, ಖುಷಿಗಳ ನಡುವೆ ನಮ್ಮ ಶಾಲೆ ಶುರುವಾಯ್ತು. ಹಾಂ, ಈ ಬಾರಿ ನಾ ಹೋಂ ವರ್ಕೂ ಮಾಡಿದ್ದೆ.
ಹತ್ತನೇ ತರಗತಿಯ ಲಕ್ಷಣ: ಸ್ಕೂಲಿಗೆಲ್ಲ ನಾವೇ ಹಿರಿಯರು ಎಂಬ ಗತ್ತು ನಮ್ಮ ಎತ್ತರವನ್ನು ಇನ್ನೂ ಎರಡಿಂಚು ಹೆಚ್ಚು ಮಾಡುತ್ತೆ. ಮೊದಲ ದಿನ ನಮ್ಮ ಕ್ಲಾಸ್ ಟೀಚರ್ ಮತ್ತು ಬೇರೆ ಬೇರೆ ವಿಷಯಗಳ ಟೀಚರ್ಸ್ ಗಳ ಪರಿಚಯವಾಯ್ತು. ಸ್ಕೂಲು ಬಿಟ್ಟು ಮನೆಗೆ ಹೊರಡುವುದು ಅಂದೇಕೋ ತಡವಾಯಿತು. ಹಾಗೆ ನಡೆದು ಹೋಗುತ್ತಿದ್ದರೆ ಹಿಂದೆ ಯಾರೋ ಬಂದಂತೆನಿಸಿ ತಿರುಗಿದರೆ, ಅವನೇ !, ನಡೆದು ಬರುತ್ತಿದ್ದ.
"ಸ್ಕೂಲಿಂದ ಯಾಕೆ ಲೇಟು?", ಅದೇನೋ ಗಂಡು ಹುಡುಗರಿಗೆ ಹೆಣ್ಣನ್ನ ಪ್ರಶ್ನಿಸದಿದ್ದರೆ ತಿಂದ ಅನ್ನ ಜೀರ್ಣವಾಗದು.
"ನಿಂಗ್ಯಾಕೆ?" ಅನ್ನಬೇಕೆಂದುಕೊಂಡೆ. ಆದರೆ ಬಾಯಿಂದ ಬಂದದ್ದು,
"ಹಾಂ ಲೇಟ್ ಆಯಿತು. ಕಂಗ್ರಾಟ್ಸ್. ಯಾವ ಕಾಲೇಜ್ ? "
ಊರಿನ ಪ್ರತಿಷ್ಟಿತ ಕಾಲೇಜ್ನ ಹೆಸರು ಹೇಳಿದ.
ಸರಿ, ಸಂಭಾಷಣೆ ಮುಗಿಯಿತು ಅಂತ ನಾ ಮುಂದೆ ಹೆಜ್ಜೆ ಇಟ್ಟರೆ, ಮತ್ತೆ ಬಂತು ಹಿಂದಿಂದ ಸ್ವರ
"ಆ ದಿನ ನಾನು ಸೈನ್ಸ್ ಪೇಪರ್ ಸರಿ ಮಾಡಿರಲಿಲ್ಲ, ಅದ್ಕೆ ಹಾಗೆ ಹೊರಟು ಹೋದೆ."
ಸ್ಸಾರಿ ಕೇಳಬೇಕಿತ್ತಲ್ಲವ ? ಕೇಳಲಿಲ್ಲ. ಆದರೆ ನನಗ್ಯಾಕೋ ಅವ ಸ್ಸಾರಿ ಅಂದಂತೆ ಕೇಳಿಸಿತು. ಅವ ಅದನ್ನು ಬಾಯಿಂದ ಹೇಳುವುದು ನನಗೂ ಆ ಕ್ಷಣಕ್ಕೆ ಬೇಡಿತ್ತೇನೋ?
ನಾನಂದೆ "ಪರವಾಗಿಲ್ಲ, ಬೈ"
"ಬೈ".
"ಬಾನಲ್ಲೂ ನೀನೆ, ಭುವಿಯಲ್ಲೂ ನೀನೆ"
ಅವಧಿಯಲ್ಲಿ ಭಾವಾಂತರಿಸಿದ ಮಾಯಾ ಎಂಜೆಲೋ ರಒಂದು ಕವಿತೆ

ಸ್ವರ್ಣಾ ಮೇಡಮ್,
ReplyDeleteಕತೆಯನ್ನು ತುಂಬ ಕುತೂಹಲಕರವಾಗಿ, ಆಸಕ್ತಿ ಹುಟ್ಟಿಸುವಂತೆ ಬರೆದಿರುವಿರಿ. ಕತೆ ಬರೆಯುವ ನಿಮ್ಮ ಶೈಲಿ ಚೆನ್ನಾಗಿದೆ. ಆದರೆ,‘ಹೆಣ್ಣಲ್ಲವೆ?...ಹೊಟ್ಟೆಕಿಚ್ಚು’ ಎನ್ನುವ ನಿಲುವನ್ನು ನಾನು ತಾತ್ವಿಕವಾಗಿ ವಿರೋಧಿಸುತ್ತೇನೆ!
‘ಅವಧಿ’ಯಲ್ಲಿಯ ನಿಮ್ಮ ಭಾವಾಂತರಿತ ಕವನವನ್ನೂ ಓದಿದೆ. ಮಾಯಾ ಎಂಜೆಲೊ ಅವರ ಸುಂದರವಾದ ಕವನವನ್ನು, ಅಷ್ಟೇ ಸುಂದರವಾಗಿ ಕನ್ನಡಿಸಿರುವಿರಿ. ಮಾಯಾ ಎಂಜೆಲೊ ಅವರ ಸಣ್ಣ ಪರಿಚಯ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು.
ನಾನೂ ಕವಿತೆಯನ್ನು ಓದಿದೆ. ಭಾಷಾಂತರ ಅನಿಸದಷ್ಟು ನೈಜವಾಗಿತ್ತು.
ReplyDeleteಮುಂದುವರೆದ ಈ ಭಾಗವೂ ರೋಚಕವಾಗಿತ್ತು.
ಕಥೆ ಬರೆಯುವ ನಿಮ್ಮ ಶೈಲಿ ಇಷ್ಟ ಆಯಿತು....ಕಥೆ ಚೆನ್ನಾಗಿದೆ......ಹಾಗೆ ನೀವು ಅನುವಾದಿಸಿದ ಕವನ ಸೂಪರ್......ಅಭಿನಂದನೆಗಳು...
ReplyDeleteಪ್ರತಿಕ್ರಿಯೆಗಾಗಿ ತಮಗಿಬ್ಬರಿಗೂ ಧನ್ಯವಾದಗಳು ಸರ್
ReplyDelete