ಯದುಗಳ ಶ್ರೇಷ್ಠ ಶೂರಸೇನನ ಮಗಳವಳು
ಕುಂತಿ ಭೋಜನಿಗೆ ದತ್ತು ಹೋಗಿ ಕುಂತಿಯಾದವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ಮದುವೆಗೆ ಮುನ್ನವೇ ಮಗುವ ಪಡೆದವಳು
ಪಡೆದ ಮಗುವ ತೊರೆದು ಬಿಟ್ಟವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ತನ್ನ ಸಂಗಾತಿಯ ತಾನೇ ಆರಿಸಿಕೊಂಡವಳು
ಆರಿಸಿಕೊಂಡವನ ಶಾಪವನ್ನೂ ಒಪ್ಪಿಕೊಂಡವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ಮತ್ತೆ ದೇವತೆಗಳಿಂದ ಹೆತ್ತವಳು
ಹೆತ್ತ ರೀತಿಗಾಗಿ ಹತ್ತು ಮಾತುಗಳ ಕೇಳಿದಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ತನ್ನ ತನಯರ ಹಕ್ಕಿಗಾಗಿ ಬಡಿದಾಡಿದವಳು
ಅದಕಾಗಿ,ಬಿಟ್ಟ ಹಾದಿಯ ಮತ್ತೆ ತುಳಿದವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ಒಂದು ಹೆಣ್ಣ ಐದು ಭಾಗ ಮಾಡಿದವಳು
ಲೋಕದೆಲ್ಲ ನಿಯಮ ಮೀರಿದವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ಮಗನಿಗಿಂತ ಸೊಸೆ ಮೇಲೆಂದ ಏಕೈಕ ಅತ್ತೆಯವಳು
ಅತ್ತೆಯ ಸೆರಗಿನಲಿ ಅಮ್ಮನಾದವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ಎಲ್ಲ ಬಗೆಯ ಧರ್ಮ ಗೆಲ್ಲಲೆಂದವಳು
ನಿಯತಿ ಮೀರಿ ನಡೆಯಲಾಗದೆಂದವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ಕಾಮಧೇನು ಮುಂದೆ ನಿಂತಾಗ ಕಷ್ಟ ಕೇಳಿದವಳು
ಕಷ್ಟದಲಿ ನಿನ್ನ ನೆನಪಿರಲೆಂದವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ಸಾರ್ವಭೌಮ ಮಗನ ಸಿಂಹಾಸನ ದಾಟಿದವಳು
ವಾನಪ್ರಸ್ಥಕೂ ತನ್ನಂತೆಯೇ ನಡೆದವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ಬದುಕ ಮೂಸೆಯಲ್ಲಿ ಪೂರ್ಣ ಬೆಂದವಳು
ಮತ್ತೆ ಅಗ್ನಿಗಾಹುತಿಯಾದವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ನಂಬುವವರಿಗೆ ಕಾರಣ ಬೇಕಿಲ್ಲ
ನಂಬದವರು ಕಾರಣಗಳನೂ ನಂಬಲ್ಲ
ಅದಕವಳುತ್ತರ ಕೊಡಲಿಲ್ಲ
ಜಾಲದಲ್ಲಿ ಕುಂತಿ : http://www.boloji.com/index.cfm?md=Content&sd=Articles&ArticleID=1190
http://www.hindupedia.com/en/Kunti
http://files.krishna.com/en/pdf/e-books/Teachings_of_Queen_Kunti.pdf
http://mruthyu.blogspot.com/2010/12/blog-post.html
http://ssubbanna.sulekha.com/blog/post/2008/01/the-three-women-in-mahabharata-2-of-3-kunti.htm
ಕುಂತಿ ಭೋಜನಿಗೆ ದತ್ತು ಹೋಗಿ ಕುಂತಿಯಾದವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ಮದುವೆಗೆ ಮುನ್ನವೇ ಮಗುವ ಪಡೆದವಳು
ಪಡೆದ ಮಗುವ ತೊರೆದು ಬಿಟ್ಟವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ತನ್ನ ಸಂಗಾತಿಯ ತಾನೇ ಆರಿಸಿಕೊಂಡವಳು
ಆರಿಸಿಕೊಂಡವನ ಶಾಪವನ್ನೂ ಒಪ್ಪಿಕೊಂಡವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ಮತ್ತೆ ದೇವತೆಗಳಿಂದ ಹೆತ್ತವಳು
ಹೆತ್ತ ರೀತಿಗಾಗಿ ಹತ್ತು ಮಾತುಗಳ ಕೇಳಿದಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ತನ್ನ ತನಯರ ಹಕ್ಕಿಗಾಗಿ ಬಡಿದಾಡಿದವಳು
ಅದಕಾಗಿ,ಬಿಟ್ಟ ಹಾದಿಯ ಮತ್ತೆ ತುಳಿದವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ಒಂದು ಹೆಣ್ಣ ಐದು ಭಾಗ ಮಾಡಿದವಳು
ಲೋಕದೆಲ್ಲ ನಿಯಮ ಮೀರಿದವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ಮಗನಿಗಿಂತ ಸೊಸೆ ಮೇಲೆಂದ ಏಕೈಕ ಅತ್ತೆಯವಳು
ಅತ್ತೆಯ ಸೆರಗಿನಲಿ ಅಮ್ಮನಾದವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ಎಲ್ಲ ಬಗೆಯ ಧರ್ಮ ಗೆಲ್ಲಲೆಂದವಳು
ನಿಯತಿ ಮೀರಿ ನಡೆಯಲಾಗದೆಂದವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ಕಾಮಧೇನು ಮುಂದೆ ನಿಂತಾಗ ಕಷ್ಟ ಕೇಳಿದವಳು
ಕಷ್ಟದಲಿ ನಿನ್ನ ನೆನಪಿರಲೆಂದವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ಸಾರ್ವಭೌಮ ಮಗನ ಸಿಂಹಾಸನ ದಾಟಿದವಳು
ವಾನಪ್ರಸ್ಥಕೂ ತನ್ನಂತೆಯೇ ನಡೆದವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ಬದುಕ ಮೂಸೆಯಲ್ಲಿ ಪೂರ್ಣ ಬೆಂದವಳು
ಮತ್ತೆ ಅಗ್ನಿಗಾಹುತಿಯಾದವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ನಂಬುವವರಿಗೆ ಕಾರಣ ಬೇಕಿಲ್ಲ
ನಂಬದವರು ಕಾರಣಗಳನೂ ನಂಬಲ್ಲ
ಅದಕವಳುತ್ತರ ಕೊಡಲಿಲ್ಲ
ಜಾಲದಲ್ಲಿ ಕುಂತಿ : http://www.boloji.com/index.cfm?md=Content&sd=Articles&ArticleID=1190
http://www.hindupedia.com/en/Kunti
http://files.krishna.com/en/pdf/e-books/Teachings_of_Queen_Kunti.pdf
http://mruthyu.blogspot.com/2010/12/blog-post.html
http://ssubbanna.sulekha.com/blog/post/2008/01/the-three-women-in-mahabharata-2-of-3-kunti.htm
kuntiya bagge uttama kavana
ReplyDeleteಸ್ವರ್ಣಾ,
ReplyDeleteಅಭಿಮಾನದಿಂದ ಮೆಚ್ಚಬೇಕಾದ ಮಹಿಳೆಯ ಬಗೆಗೆ, ಮೆಚ್ಚುವಂತಹ ಕವಿತೆಯನ್ನು ಬರೆದಿದ್ದೀರಿ. ಇಂತಹ ಸ್ವಾಭಿಮಾನದ ಹಾಗು ಅರಿವುಳ್ಳ ವ್ಯಕ್ತಿ ನಮ್ಮ ಆದರ್ಶವಾಗಬೇಕು. ಪುರಾಣದ ಪಾತ್ರಗಳನ್ನು ಆಧುನಿಕ ದೃಷ್ಟಿಯಿಂದ ನೋಡುವ ನಿಮ್ಮ ಕವನಕ್ಕೆ ಅಭಿನಂದನೆಗಳು.
ಧನ್ಯವಾದಗಳು ಸುನಾಥ್ ಸರ್
ReplyDeleteಮತ್ತು ಸೀತಾರಾಂ ಸರ್ ಇಲ್ಲಿಗೆ ಸ್ವಾಗತ.
ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ಹೌದು.... ಕುಂತಿ.... ಅವಳಾವ ಕಷ್ಟಕೂ ಅಂಜಲಿಲ್ಲ
ReplyDeleteಲೋಕಕುತ್ತರ ಕೊಡಲಿಲ್ಲ .....ಉತ್ತಮ ಕವನ....
ನನ್ನ ಬ್ಲಾಗ್ ಗೂ ಬನ್ನಿ..
http://ashokkodlady.blogspot.com/
ಧನ್ಯವಾದಗಳು ಸರ್.
ReplyDeleteನಿಮ್ಮ ಖುಷಿ ನೋಡಿದ್ದೇನೆ :)
ಸ್ವರ್ಣಾ
Wonderful !. ನನಹೆ ಹಿಂದಿಯ 'ಕುಚ್ ತೋ ಲೋಗ್ ಕಹೇಂಗೆ, ಲೋಗೋಂಕಾ ಕಾಮ್ ಹಿ ಕೆಹೆನಾ' ಹಾಡು ನೆನೆಪಾಯಿತು. ಇಂತಹ ಪಾತ್ರಗಳು ನಮಗೆ ಆದರ್ಶವಾಗಬೇಕು ಎನ್ನುವುದು ನಿಜ. ನೀವು ಕವನದಲ್ಲಿ ಚಿತ್ರಿಸಿರುವ ಪರಿ ತುಂಬ ಚೆನ್ನಾಗಿದೆ.
ReplyDeleteಅವಳಾವ ಕಷ್ಟಕೂ ಅಂಜಲಿಲ್ಲ
ReplyDeleteಲೋಕಕುತ್ತರ ಕೊಡಲಿಲ್ಲ
ಎನ್ನುತ್ತಲೇ ಬಿಚ್ಚುತ್ತಾ ಹೋಗುವ ಪರಿ ಅತ್ಯಂತ ಸುಂದರವಾಗಿದೆ ಸ್ವರ್ಣಾ ಮೇಡಂ.. ಆದರೂ ಅವಳನ್ನು ಲೋಕ ಕೇಳಲೇ ಇಲ್ಲ ಎಂದೆನಿಸುತ್ತದೆ.
ಸುಬ್ರಮಣ್ಯ ಸರ್ ಮತ್ತು ಭಟ್ ಸರ್ ನಿಮಗೆ ಧನ್ಯವಾದಗಳು.
ReplyDelete@ಭಟ್ ಸರ್, ಕುಂತಿಯ ಬಗ್ಗೆ ಹಲವಾರು ಜನ ಪ್ರಶ್ನೆ ಎತ್ತಿದ್ದಾರೆ ಸರ್ :)ಆ ಪ್ರಶ್ನೆಗಳ ಓದಿದಾಗ ಅನಿಸಿದ್ದು ಮೇಲಿನ ಸಾಲುಗಳು
ಸ್ವರ್ಣಾ