ಗೆಳತಿಗೆ ಅವನೊಂದಿಗಿನ ಸಂಭಾಷಣೆಯನ್ನ ಏಕೆ ಹೇಳಲಿಲ್ಲ ಎಂಬ ಪ್ರಶ್ನೆಗೆ ಇಂದಿಗೂ ಉತ್ತರ ನನಗೆ ಗೊತ್ತಿಲ್ಲ.
ಒಟ್ಟಿನಲ್ಲಿ ಹೇಳಲಿಲ್ಲ.
ಒಂಭತ್ತನೇ ತರಗತಿ ಇದ್ದದ್ದು ಶಾಲೆಯ ತುಸು ಹಿಂಭಾಗದಲ್ಲಿ, ಕ್ಲಾಸಿನ ಕಿಟಕಿ ಇಂದ
ಕಣ್ಣು ಹಾಯಿಸಿದರೆ ಒಂದಷ್ಟು ಮರಗಳ ಗುಂಪಿತ್ತು. ಅಲ್ಲಿನ ಅಳಿಲುಗಳ ನೋಡುವುದು
ಬಹುತೇಕ ಹುಡುಗಿಯರ ನೆಚ್ಚಿನ ಟೈಮ್ ಪಾಸು. ಹೇಳಿಕೊಳ್ಳುವಂಥ ಮತ್ಯಾವ ವಿಷಯವೂ
ಆ ವರ್ಷ ನಡೆಯಲಿಲ್ಲ . ವರ್ಷಗಳು ಹೇಗೂ ಉರುಳುತ್ತವೆ. ಆದರೆ ವಿಧ್ಯಾರ್ಥಿ ಜೀವನದ ಒಂದು advantage
ಎಂದರೆ ಅವು ಬೇಗ ಉರುಳಿದಂತೆ ನಮಗೆ ಭಾಸವಾಗುತ್ತವೆ.
ಶೈಕ್ಷಣಿಕ ವರ್ಷದ ಎಲ್ಲ ಗಲಾಟೆ ಮುಗಿದು, ಪ್ರೈಮರಿ ಸ್ಕೂಲ್ ಮಕ್ಕಳ ಮಾತಲ್ಲಿ, ನಮ್ಮ ದೊಡ್ಡ ಪರೀಕ್ಷೆಯೂ
ಬಂತು. ಆಗ ಹತ್ತನೇ ತರಗತಿಯವರಿಗೆ ಪೂರ್ವತಯಾರಿ (preparatory ) ಪರೀಕ್ಷೆ ನಡೆಯುತ್ತಿತ್ತು.
ಇಷ್ಟು ತಿಂಗಳಲ್ಲಿ ನಾನ್ಯಾವತ್ತೂ ಅವನನ್ನ ನೋಡಲಿಲ್ಲ, ಎಂದಿನಂತೆ ನೋಡಲೇಬೇಕೆಂಬ ಹಠವೂ ಇರಲಿಲ್ಲ.
ಹತ್ತನೇ ತರಗತಿಯವರಿಗೆ ಪರೀಕ್ಷೆ ನಡೆವಾಗ ಉಳಿದವರಿಗೆ ರಜೆ. ರಜೆಯಲ್ಲಿ ಕೂತು ನಮ್ಮ ಪರೀಕ್ಷೆಗೆ ಓದಬೇಕೆಂಬ
ನಿಯಮವಿದ್ದರೂ, ಅದನ್ನ ನಾನು ಪಾಲಿಸಿದ್ದು ನನಗೆ ನೆನಪಿಲ್ಲ.
ನಮ್ಮದು ಸಣ್ಣ ಊರು, ಎಲ್ಲ ಕಡೆಗೆ ನಡೆದೇ ಹೋಗುವಷ್ಟು ದೂರ. ಸ್ಕೂಲಿಗೂ ನಡೆದೇ ಹೋಗುತ್ತಿದ್ದೆವು.
ಸ್ಕೂಲಿನ ಕೆಲವು ಸಿನಿಯರ್ಸ್ ನನಗೆ ಫ್ರೆಂಡ್ಸ್ಅಲ್ಲದಿದ್ದರೂ ಪರಿಚಯವಿದ್ದರು. ಹಾಗೆ ಪರಿಚಯವಿದ್ದರು ಹೇಗೆ
ಪರೀಕ್ಷೆ ಬರೆದರೆಂಬ ಕೂತೂಹಲವ ತಣಿಸಿಕೊಳ್ಳಲು ನಾನು ಸ್ಕೂಲಿನತ್ತ ಹೋಗಿದ್ದೆ ಆ ದಿನ. ಅವನ ಮನೆಗೆ ನಮ್ಮ ಸ್ಕೂಲ್
ದಾಟಿಯೇ ಹೋಗಬೇಕಿತ್ತು. ಅವನು ಪರೀಕ್ಷೆ ಮುಗಿಸಿ ಹೊರಟಿದ್ದ. ನಾನವನ್ನ ನೋಡಿದೆ, ಅವನೂ ನೋಡಿದ. ಆದರೆ ನಿಲ್ಲಲೇ
ಇಲ್ಲ!
ನಾ ಸ್ಕೂಲಿಗೆ ಹೋದೆ, ಆವತ್ತು ಇದ್ದ ಪೇಪರ್ ವಿಜ್ಞಾನ. ಪೇಪರ್ ಸುಲಭವಾಗೇ ಇತ್ತೆಂದು ಎಲ್ಲರೂ ಹೇಳಿದರು.
ಆದರೂ ಅವನೇಕೆ ನಿಲ್ಲಲಿಲ್ಲ?

ಇದೀಗ ಕುತೂಹಲಕರವಾದ ಪತ್ತೇದಾರಿ ಕತೆ ಆಯಿತಲ್ಲ!
ReplyDeleteಮುಂದುವರೆದ ಭಾಗ ಹಳ್ಳಿಗಾಡಿನ ಪರಿಸರ ವಿವರಿಸುತ್ತಾ ಓದಿಸಿಕೊಂಡು ಹೋಯಿತು.
ReplyDeleteಆತ ಏಕೆ ನಿಲ್ಲಲಿಲ್ಲ, ಮೇಡಂ?
@ಸುನಾಥ್ ಸರ್, ಪತ್ತೇದಾರಿ ಪುರುಷೋತ್ತಮ ಬರುತ್ತಾನೆ :)
ReplyDelete@ಬದರಿ ಸರ್, ಅವಳು ನನಗಿನ್ನೂ ಹೇಳಿಲ್ಲ
ತಮಗಿಬ್ಬರಿಗೂ ಧನ್ಯವಾದಗಳು
ನಿಜವಾಗಲೂ ಅವನೇಕೆ ನಿಲ್ಲಲಿಲ್ಲ ಮೇಡಂ ?
ReplyDeleteಅವ NIL ಅಲ್ಲ ಅಂತಾನೇ ?
ಅವ ಖಂಡಿತ ನಿಲ್ ಅಲ್ಲ ಸರ್ :)
ReplyDeleteಪ್ರತಿಕ್ರಿಯೆಗಾಗಿ ಧನ್ಯವಾದಗಳು.