ಮಗಳೇ ಪುಟ್ಟಕ್ಕ ........
ಬಿಟ್ಟ ಹೂಗಳೆಲ್ಲ ಹಣ್ಣಾಗವು
ಕಂಡ ಕನುಸುಗಳೆಲ್ಲ ನನಸಾಗವು
ಆದರೂ, ಕನಸಿರಲಿ ಕಂಗಳಲಿ
ಅವಿಲ್ಲದೆ ಬೆಳಕಿಲ್ಲ ಬಾಳಿನಲಿ
ಒಂದೇ ಮರದ ಹಣ್ಣುಗಳೆಲ್ಲ ಸಿಹಿಯಲ್ಲ
ಮನುಜರೆಲ್ಲರೂ ಹಿತರಲ್ಲ
ಆದರೂ, ಮಾನವರಿಗಾಗಿ ಪ್ರೀತಿಇರಲಿ
ಅದಿಲ್ಲದೆ ಸವಿಇಲ್ಲ ಬಾಳಿನಲಿ
ಎಲ್ಲ ಬಾಣಗಳೂ ಗುರಿ ತಲುಪಲ್ಲ
ಹುಟ್ಟಿದ ಎಲ್ಲರೂ 'ಮಹತ್ತನ್ನ' ಸಾಧಿಸಲ್ಲ
ಆದರೂ, ಮಹತ್ತಿನೆಡೆಗೆ ನಿನ್ನ ಹೆಜ್ಜೆ ಇರಲಿ
ಅದಿಲ್ಲದೆ ಅರ್ಥವಿಲ್ಲ ಬಾಳಿನಲಿ
ಮೊದಲ ಪ್ರೀತಿಯ ಎಚ್ಚರಿಕೆ ಇಂದ ಆಯ್ದುಕೊ
ಅದರ ನೇಹದ ಸವಿಯ ಬಾಳೆಲ್ಲ ಕಾಯ್ದುಕೊ
ಮೊದಲ ಪ್ರೀತಿ, ಮೊದಲ ಹೆರಿಗೆ ನೋವು ಮರೆಯಲಾಗದು
ನೆನಪ ತೊರೆಯಲಾಗದು
ಬದುಕಿನಲಿ ಏನಿರಲಿ, ಇಲ್ಲದಿರಲಿ
ನಿನ್ನ ಮುಖದಲೊಂದು ನಗುವಿರಲಿ
ನೆನ್ನೆ ಹೋದರೇನಾಯ್ತು, ಇಂದು ಕಾದಿದೆ
ಇಂದೂ ಹೋದರೇನಾಯ್ತು, ನಾಳೆ ಕಾದಿದೆ
ಭುವಿಗೆ ಬಂದ ಎಲ್ಲ ಜೀವಿಗೂ ಬದುಕುವ ಹಕ್ಕಿದೆ
ಒಂದೊಂದು ಜೀವಕೂ ಎಲ್ಲೋ ಒಂದು ತುತ್ತಿದೆ
ಪ್ರೀತಿಇಂದ, ನಗುವಿನೊಂದಿಗೆ ಬದುಕು
ನಿನ್ನ ಬಾಳಿನ ಅರ್ಥ ಹುಡುಕು
*****************************************************
ನನ್ನ ಬಿಂಬ, ನನ್ನ ಕನಸು ಅವಳೆನ್ನ ಮಗಳು,
ಹುಟ್ಟುವ ಮೊದಲೇ ಬೊಂಬೆಯಾಗಿ ನನ್ನೊಂದಿಗಿದ್ದವಳು.
ಮೊದಲಸಲ ನನ್ನ ನೋಡಿ ಅತ್ತವಳು
ಅದೇನನ್ನೋ ಹೇಳ ಹೊರಟವಳು
ಮನೆ ಮನದ ತುಂಬೆಲ್ಲ ಗೆಜ್ಜೆಯೊಂದಿಗೆ ಕುಣಿದಾಡಿದವಳು
ಹೊಸದೊಂದು ಬದುಕ ಮನೆಗೆ ತಂದವಳು
ಅಮ್ಮನ ಅಳುವ ಹೆಗಲವಳು
ಅಪ್ಪನ ಪ್ರೀತಿಯ ಪರಿಭಾಷೆಯವಳು
ಬೆಳೆಯುತ್ತ ಬೆಳೆಯುತ್ತ ಅಮ್ಮನಿಗೇ ಅಮ್ಮನಾದವಳು
ಬಿಟ್ಟ ಹೂಗಳೆಲ್ಲ ಹಣ್ಣಾಗವು
ಕಂಡ ಕನುಸುಗಳೆಲ್ಲ ನನಸಾಗವು
ಆದರೂ, ಕನಸಿರಲಿ ಕಂಗಳಲಿ
ಅವಿಲ್ಲದೆ ಬೆಳಕಿಲ್ಲ ಬಾಳಿನಲಿ
ಒಂದೇ ಮರದ ಹಣ್ಣುಗಳೆಲ್ಲ ಸಿಹಿಯಲ್ಲ
ಮನುಜರೆಲ್ಲರೂ ಹಿತರಲ್ಲ
ಆದರೂ, ಮಾನವರಿಗಾಗಿ ಪ್ರೀತಿಇರಲಿ
ಅದಿಲ್ಲದೆ ಸವಿಇಲ್ಲ ಬಾಳಿನಲಿ
ಎಲ್ಲ ಬಾಣಗಳೂ ಗುರಿ ತಲುಪಲ್ಲ
ಹುಟ್ಟಿದ ಎಲ್ಲರೂ 'ಮಹತ್ತನ್ನ' ಸಾಧಿಸಲ್ಲ
ಆದರೂ, ಮಹತ್ತಿನೆಡೆಗೆ ನಿನ್ನ ಹೆಜ್ಜೆ ಇರಲಿ
ಅದಿಲ್ಲದೆ ಅರ್ಥವಿಲ್ಲ ಬಾಳಿನಲಿ
ಮೊದಲ ಪ್ರೀತಿಯ ಎಚ್ಚರಿಕೆ ಇಂದ ಆಯ್ದುಕೊ
ಅದರ ನೇಹದ ಸವಿಯ ಬಾಳೆಲ್ಲ ಕಾಯ್ದುಕೊ
ಮೊದಲ ಪ್ರೀತಿ, ಮೊದಲ ಹೆರಿಗೆ ನೋವು ಮರೆಯಲಾಗದು
ನೆನಪ ತೊರೆಯಲಾಗದು
ಬದುಕಿನಲಿ ಏನಿರಲಿ, ಇಲ್ಲದಿರಲಿ
ನಿನ್ನ ಮುಖದಲೊಂದು ನಗುವಿರಲಿ
ನೆನ್ನೆ ಹೋದರೇನಾಯ್ತು, ಇಂದು ಕಾದಿದೆ
ಇಂದೂ ಹೋದರೇನಾಯ್ತು, ನಾಳೆ ಕಾದಿದೆ
ಭುವಿಗೆ ಬಂದ ಎಲ್ಲ ಜೀವಿಗೂ ಬದುಕುವ ಹಕ್ಕಿದೆ
ಒಂದೊಂದು ಜೀವಕೂ ಎಲ್ಲೋ ಒಂದು ತುತ್ತಿದೆ
ಪ್ರೀತಿಇಂದ, ನಗುವಿನೊಂದಿಗೆ ಬದುಕು
ನಿನ್ನ ಬಾಳಿನ ಅರ್ಥ ಹುಡುಕು
*****************************************************
ನನ್ನ ಬಿಂಬ, ನನ್ನ ಕನಸು ಅವಳೆನ್ನ ಮಗಳು,
ಹುಟ್ಟುವ ಮೊದಲೇ ಬೊಂಬೆಯಾಗಿ ನನ್ನೊಂದಿಗಿದ್ದವಳು.
ಮೊದಲಸಲ ನನ್ನ ನೋಡಿ ಅತ್ತವಳು
ಅದೇನನ್ನೋ ಹೇಳ ಹೊರಟವಳು
ಮನೆ ಮನದ ತುಂಬೆಲ್ಲ ಗೆಜ್ಜೆಯೊಂದಿಗೆ ಕುಣಿದಾಡಿದವಳು
ಹೊಸದೊಂದು ಬದುಕ ಮನೆಗೆ ತಂದವಳು
ಅಮ್ಮನ ಅಳುವ ಹೆಗಲವಳು
ಅಪ್ಪನ ಪ್ರೀತಿಯ ಪರಿಭಾಷೆಯವಳು
ಬೆಳೆಯುತ್ತ ಬೆಳೆಯುತ್ತ ಅಮ್ಮನಿಗೇ ಅಮ್ಮನಾದವಳು
ಹಾಡು, ಚೆನ್ನಾಗಿದೆ ಸ್ವರ್ಣಾ ಮೇಡಂ :))
ReplyDelete`ಅಮ್ಮನಿಗೇ ಅಮ್ಮನಾದವಳು’! ಸುಂದರವಾದ ಭಾವನೆ. ಮಗುವಿಗೆ ಹುಟ್ಟುಹಬ್ಬದ ಶುಭಾಶಯಗಳು.
ReplyDeleteಸುನಾಥ್ ಸರ್ , ನಿಮ್ಮ ಹಾರೈಕೆಗೆ ಧನ್ಯವಾದಗಳು.
ReplyDeleteಭಟ್ ಸರ್, ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ಪುಟ್ಟ ಕಂದಮ್ಮನಿಗೆ ತಾಯಿಯ ಪ್ರೀತಿಯ ಕಾವ್ಯ ಹಾರೈಕೆ. ಪುಟ್ಟಿಯ ಭವಿಷ್ಯ ಅಮೋಘವಾಗಿರಲಿ.
ReplyDeleteಧನ್ಯವಾದಗಳು ಬದರಿ ಸರ್
ReplyDelete