ಯಾಕೆ ಹಾಗೆ ಹೋದ ಅನ್ನೋ ಪ್ರಶ್ನೆಗೆ ಉತ್ತರ ಬಹುತೇಕ ಖಚಿತವಾಗಿ ಗೊತ್ತಿತ್ತು,
ಬಹುಶಃ ಪರೀಕ್ಷೆ ಚೆನ್ನಾಗಿ ಮಾಡಿಲ್ಲ. ಇದನ್ನ ಬಿಟ್ಟು ಅವನಿಗೆ ಇನ್ಯಾವುದೂ ಅಂಥ ದೊಡ್ಡ ಸಮಸ್ಯೆ ಇರಲಿಲ್ಲ.
ಒಂದೆರಡು ದಿನ ಅದು ಕಾಡಿದರೂ, ಈ ಬಾರಿ ಕಾಲೇಜು ಗೆಳತಿಯರು ಎಲ್ಲವನ್ನ ಮರೆಸಿದರು.
ಯಾವ ಪದವಿ ತೊಗೋಬೇಕು ಅನ್ನೋ ಕಲ್ಪನೆ ನನಗೇನೂ ಇರಲಿಲ್ಲ. ಅದ್ದರಿಂದ ನನ್ನ ಓದು ಅಷ್ಟಕಷ್ಟೇ ಇತ್ತೇನೋ?
ಒಟ್ಟಿನಲ್ಲಿ ಓದುತ್ತಿದ್ದೆ. ಸುಮಾರು ತಿಂಗಳು ಅವನ ಪತ್ತೆ ಇರಲಿಲ್ಲ. ಆಮೇಲೆ ಯಾರೋ ಅಂದರು ಎಂಜಿನಿಯರಿಂಗ್ ಸೇರಿದ ಅಂತ. ಸ್ವಲ್ಪ ದಿನಕ್ಕೆ ಮತ್ತೆ ಸುಧ್ಧಿ ಬಂತು ಇಲ್ಲ ಮೆಡಿಕಲ್ ಓದುತ್ತಿದ್ದಾನೆ, ಡೊನೇಶನ್ ಸೀಟು ಅಂತ.
ಅವನು ಡಾಕ್ಟರಾಗುತ್ತಾನೆಂಬುದು ನಿಜಕ್ಕೂ ಖುಷಿ ಕೊಟ್ಟಿತ್ತು.
ಯಾತಕ್ಕೋ ಆ ಕಡೆ ಹೋದವಳು, ಒಂದು ದಿನ ಅವನ ಕಾಲೇಜಿನ ಹತ್ತಿರ ನೋಡಿದೆ.
ನಿಂತೇ ನಿಲ್ಲುವನೆಂಬ ಭರವಸೆಯ ಮೇಲೆ ನಾ ನಿಂತೆ ಆದರೆ ಅವ ನನ್ನತ್ತ ನೋಡಲೂ ಇಲ್ಲ.
ಗಾಡಿಯಲ್ಲಿ, ಜೊತೆಗೆ ಅವನ ತಂದೆ ಇದ್ದರು. ಅವನಿಗೆ ನಾಲ್ಕು ಜನರಲ್ಲಿ ನಮ್ಮ ಪರಿಚಯ ತೋರಿಸಿಕೊಳ್ಳುವುದು
ಇಷ್ಟವಿಲ್ಲವೆಂಬುದು ಮತ್ತೆ ಸಾಬೀತಾಗಿತ್ತು.
ಅದಾಗಿ ಎರಡೇ ದಿನಕ್ಕೆ ಮತ್ತೆ ಸಿಕ್ಕ. ನಿಲ್ಲ ಬೇಡವೆಂಬ ಬುಧ್ಧಿಯ ಮಾತನ್ನು ಕಾಲು ಕೇಳಲಿಲ್ಲ. ಅವನ ಮುಖದ ಮುಗುಳ್ನಗೆ ಮರಳಿತ್ತು. ಅಂದು ನಿಲ್ಲದರ ಬಗ್ಗೆ ನಾ ಕೇಳಲಿಲ್ಲ ಅವ ಹೇಳಲಿಲ್ಲ.
" ನಂಗೆ ಮೆಡಿಕಲ್ ಓದಬೇಕು ಅಂತ ತುಂಬಾ ಆಸೆ ಇತ್ತು, ಏನಾಗತ್ತೋ ಅಂದ್ಕೊಂಡಿದ್ದೆ. ಸಧ್ಯ" ಮೊದಲ ಬಾರಿ ಎರಡು ಮೂರು ವಾಕ್ಯ ಒಟ್ಟಿಗೆ ಆಡಿದ್ದ.
ಧನಿ ಕೇಳಲು ಹಿತವಾಗಿತ್ತು.
"ಹ್ಮ್ಮ್ ಒಳ್ಳೆದಾಯ್ತು" ನನ್ನ ಅರ್ಧಂಬರ್ಧ ವಾಕ್ಯ ಮುಗಿದಿತ್ತು.
ಮೆಡಿಕಲ್ ಕಾಲೇಜು, ಅದರ ವೈಭವದ ಬಗ್ಗೆ ಒಂದು ಪ್ರಬಂಧ ಬರೆಯುವಷ್ಟು ಹೇಳಿದ.
ಸುಮಾರು ಅರ್ಧ ಗಂಟೆಯಾದ ಮೇಲೆ ನಾನೇ ಹೊರಟೆ.
ಯಾಕೋ ಅವ ಬಿಳಿಯ ಏಪ್ರನಲ್ಲಿ ಹೊಸಬನಾಗಿ ಕಂಡ.
"ನೀನಿದ್ದರೇನು ಹತ್ತಿರ ಎಷ್ಟೊಂದು ನಡುವೆ ಅಂತರ "
ಅವಧಿಗಾಗಿ ಭಾವಂತರಿಸಿದ ಕೈಫಿ ಅಜ್ಮಿ ಯವರ ಒಂದು ಕವನ http://avadhimag.com/?p=56020

This comment has been removed by the author.
ReplyDeleteಧನ್ಯವಾದಗಳು ಸರ್
ReplyDeleteಸ್ವರ್ಣಾ
ತುಂಬಾ ಚೆನ್ನಾಗಿದೆ ಸ್ವರ್ಣಕ್ಕ. :) ಒಳ್ಳೆಯ ಅನುವಾದ.
ReplyDeleteಥ್ಯಾಂಕ್ಯು ಕಿರಣ್ :)
ReplyDeleteSwarna,
ReplyDeleteThe story is running interestingly. The translation of Gulzar's moving poem is beautifully translated.
I could not comment early as my modem is out of order.
ಧನ್ಯವಾದಗಳು ಕಾಕಾ
ReplyDeleteಕೈಫಿ ಆಜ್ಮಿಯವರ ರಚನೆಯನ್ನು ಗುಲ್ಜಾರರದು ಎಂದಿದ್ದಕ್ಕೆ ಕ್ಷಮೆ ಇರಲಿ
ReplyDeleteಗೆಳೆಯ ಡಾಕ್ಟರ್ ಆಗುತ್ತಾನೆ ಅನ್ನೋ ಖುಷಿ ಗಳಿಗೆಯಲ್ಲೇ ಅವನು ತೀರಾ ಹೊಸಬನಾಗಿ ಕಾಣಿಸಲು ಶುರುವಾದ ಎಂದರೆ, ಅವನ ನಡುವಳಿಕೆ ಮತ್ತಷ್ಟು ಗೊಜಲಾಗಿದೆ ಅಂತಲೇ ಅರ್ಥ!!!
ReplyDeleteತಂದೆಯ ಜೊತೆಗಿದ್ದಾಗ ಕೆಲವರು ಹಾಗೆ ಬೇರೆಯವರ ಹತ್ತಿರ ಮಾತನಾಡಲು ಹಿಂಜರೆಯುತ್ತಾರೆ.
ವಾವ್ ಕೈಫಿ ಆಜ್ಮಿ ,
ಮೂಲ ಕವಿತೆಗೆ ಬಂಗ ಬರದ ಹಾಗೇ ಭಾವಾನುವಾದವೇ ಅಲ್ಲವೇನೋ ಅನ್ನುವಂತೆ ಬರೆದುಕೊಟ್ಟಿದ್ದೀರ. ತುಂಬಾನೇ ಇಷ್ಟವಾಯಿತು.
ನಿಮ್ಮ ತಾಳ್ಮೆಗೆ ವಂದನೆ ಮತ್ತು ಧನ್ಯವಾದಗಳು ಬದರಿ ಸರ್.
ReplyDelete