Thursday, November 22, 2012

ಹಳ್ಳ ಸೇರದ ಹನಿಗಳು....ಭಾವಬನಿಗಳು - ೪

೧.ನೀ ಮೌನವಾಗೆ ಮನ ಗೂಡಿರದ ಗುಬ್ಬಚ್ಚಿ
ನೀನುಲಿಯೆ ಹಾರುವುದು ರೆಕ್ಕೆ ಬಿಚ್ಚಿ

 ೨. ಹಾಳಾದ ಹೃದಯ
     ನನ್ನ ದೇಹದಲ್ಲಿರತ್ತೆ
     ಅವನ ನೋವಿಗಾಗಿ
      ಅಳತ್ತೆ !

೩. ರಾತ್ರಿಗಾಗಿ ಕಾಯುತ್ತೇನೆ ನಾ
  ತಾರೆ ಬರೆವ ಚಿತ್ತಾರಕ್ಕಾಗಿಅಲ್ಲ,
  ನಿನ್ನ ಕಂಗಳ ಕಾಂತಿಗೆ ಸರಿದೂಗುವ
 ಮಿಂಚಲ್ಲಿ ನಿನ್ನ ಕಣ್ಣ
 ಕಾಣುವ ಹಂಬಲದಿಂದ !

ಹುಣ್ಣಿಮೆಗಾಗಿ  ಕಾಯುತ್ತೇನೆ ನಾ
ಬೆಳದಿಂಗಳ ಆಸೆ ಇಂದಲ್ಲ ,
ನಿನ್ನ ನಗುವಿಗೆ ಸಾಟಿಯಾಗುವ
ಜ್ಯೋತ್ಸ್ನೆಯಲ್ಲಿ ನಿನ್ನ ಮೊಗವನ್ನ
ಕಾಣುವಾಸೆಯಿಂದ !


೪. ಕದವಿಕ್ಕಿ ಕೂತೆ ಅವನ
ನೆನಪು ಕಾಡಬಾರದೆಂದು,
ಮರೆತೇ ಬಿಟ್ಟಿದ್ದೆ  ಅವನಿಗೆ
ಕದಗಳ ಹಂಗಿಲ್ಲವೆಂದು !

 ೫ . ಕವಿತೆ ಪದಗಳಲಿಲ್ಲ
ಪದಗಳ ನಡುವಿನ ಮೌನದಲ್ಲಿದೆ,
ಪ್ರೇಮ  ತುಟಿ ಮಿಸುಕಿಸಿದ ಶಬ್ಧದಲಿಲ್ಲ
ತುಂಬಿದ ಕಣ್ಣಲಿದೆ

೬. ನಿನ್ನೊಡನೆ ಸಾಗಿ ಹೆಜ್ಜೆ ಮೂಡಿಸಬೇಕಿದ್ದ
ಸಂಜೆಗಳು  ನಿನಗಾಗಿ ಕಾಯುತ್ತಾ  ಅಳಿದವು
ತುಟಿಯ ಮೇಲಿನ ಚಿತ್ರವಾಗಬೇಕಿದ್ದ
ಶಬ್ಧಗಳು ಕಂಬನಿಯಲ್ಲಿ ಕರಗಿದವು

೭.  ಅವನಂದ,
    ಮುರಿದ ವೀಣೆ ,
    ಮುಗಿದ ಹಾಡು,
    ನಮ್ಮ ಬಂಧ.
   ಅವಳಂದುಕೊಂಡಳು
    ಏಕ ತಾನ,
    ಸ್ವಗತ ಗಾನ,
    ಎಲ್ಲ ಚಂದ.

೮. ಪ್ರಾರ್ಥನೆ ಮೂಡಿತ್ತು ಮನದಲಿ,
   ನಗುವಿರಲಿ ಸದಾ ನಿನ್ನ ಮೊಗದಲಿ
   ನಾ ತೇಲಿ ಹೋದೆ ನಿನ್ನ ನಗುವಲಿ,
   ನಿನ್ನ ಜೊತೆ ಇರಲಿ ನನ್ನ ಬಾಳಲಿ,
   ಎಂಬ ಪ್ರಾರ್ಥನೆ ಹಾಗೇ ಉಳಿಯಿತೆನ್ನ ಎದೆಯಲಿ !

೯.  ಹುಟ್ಟಿಸಲೇ ಬೇಡವೆಂಬ ಬೇಡಿಕೆ ಹೊತ್ತು
ಗುಡಿಗೆ ಬರೋಣವೆಂದು ಸುತ್ತು,
ಹೆಜ್ಜೆ ಇಡುವ ಹೊತ್ತು,
ನಿನ್ನ ನೆನಪು ಬಂತು ,
ಬೇಡಿಕೆ ಬದಲಾಗಿ ಆಯ್ತು ,
ಹುಟ್ಟಿಸು ಮತ್ತೂ ಮತ್ತೂ !


೧೦.   ತುತ್ತಿಗಾಗಿ  ಹೋರಾಡ   ಬೇಕು  
ಹಕ್ಕಿಗಾಗಿ 
ಹೋರಾಡ  ಬೇಕು
ಉಸಿರಿರುವವರೆಗಿನ ಹೋರಾಟ ಬದುಕು

ಹಸಿವಿಗಾಗಿ ದುಡಿಯ ಬೇಕು
ಕಸುವಿಗಾಗಿ  ದುಡಿಯಬೇಕು
ದಣಿಯುವವರೆಗಿನ ದುಡಿತ ಬದುಕು

ಲುಮೆಗಾಗಿ     ಪ್ರೀತಿಸಬೇಕು 
ನೆನಪಿಗಾಗಿ  ಪ್ರೀತಿಸಬೇಕು
ಹೊರಡುವತನಕದ  ಪ್ರೀತಿ    ಬದುಕು

ಇದೆಲ್ಲದರಿಂದ   ಮುಕ್ತವಾಗುವ   ಸತ್ಯದ  ಹುಡುಕಾಟವೂ  ಬದುಕು  !


११ . लोग  पूछे "क्यों आसूँ बहा रहीं हो ?"
हम बोले  "बस अरमानों की अर्थी निकल रहीं हैं "


12 comments:

  1. ಕವಿತೆ ಪದಗಳಲಿಲ್ಲ
    ಪದಗಳ ನಡುವಿನ ಮೌನದಲ್ಲಿದೆ,
    ಪ್ರೇಮ ತುಟಿ ಮಿಸುಕಿಸಿದ ಶಬ್ಧದಲಿಲ್ಲ
    ತುಂಬಿದ ಕಣ್ಣಲಿದೆ
    ಕೆಲವು ಸಾಲುಗಳು ಮನಸ್ಸಿಗೆ ತುಂಬಾ ಹತ್ತಿರವಾಗಿಬಿಡುವ ಹಾಗಿದೆ.....
    ಚನ್ನಾಗಿದೆ... ಇಷ್ಟವಾಯಿತು.

    ReplyDelete
    Replies

    1. ಇಲ್ಲಿಗೆ ಸ್ವಾಗತ, ಧನ್ಯವಾದಗಳು .

      Delete
  2. ಎಲ್ಲಾ ಹನಿಗಳೂ ಸುಪರ್...ಅದರಲ್ಲೂ ಕೊನೆಯ ಹಿಂದಿ ಹನಿ wonderful....

    ReplyDelete
  3. ವಾವ್ ಯಾವುದನ್ನು ಮೆಚ್ಚಲಿ? ಯಾವುದನ್ನು ಬೇಡ? ಮೊದಲ ಸಾಲುಗಳೇ ನನ್ನ ಮನದಾಶಯ.

    ನೀ ಮೌನವಾಗೆ ಮನ ಗೂಡಿರದ ಗುಬ್ಬಚ್ಚಿ
    ನೀನುಲಿಯೆ ಹಾರುವುದು ರೆಕ್ಕೆ ಬಿಚ್ಚಿ

    ತೀವ್ರ ವಿಷಾದವನ್ನೂ ಕಟ್ಟಿಕೊಡುವ ಪರಿ,

    ತುಟಿಯ ಮೇಲಿನ ಚಿತ್ರವಾಗಬೇಕಿದ್ದ
    ಶಬ್ಧಗಳು ಕಂಬನಿಯಲ್ಲಿ ಕರಗಿದವು

    ಆಂತರ್ಯದಲ್ಲಿ ಇಂತಹ ಒಳ್ಳೆಯ ಕವಿತೆ ಇಟ್ಟುಕೊಂಡು ಲೇಖನಗಳನ್ನೇ ಬರೆಯುತ್ತಿರಬೇಡಿ, ಪ್ಲೀಸ್....

    ಮೆಚ್ಚಿದೆ, ಮೆಚ್ಚಿದೆ, ಮೆಚ್ಚಿದೆ.

    ReplyDelete
    Replies
    1. ಬದರಿ ಸರ್, ನಿಮ್ಮ ಪ್ರೋತ್ಸಾಹಕ್ಕೆ ಅಭಾರಿ.

      Delete
  4. ಒಂದೇ ಸಾಲಿನಲ್ಲಿ ಹೇಳಬಹುದಾದರೆ..... "ಅವೀಸ್ಮರಣೀಯ ಕವಿಸ್ಮರಣೀಯ, ಕಿವಿಸ್ಮರಣೀಯ"

    ನಿಮ್ಮ ಇಡೀ ಬ್ಲಾಗಿಗೂ ಈ ಮಾತು ಅನ್ವಯಿಸುತ್ತೆ..!! ತುಂಬಾ ಇಷ್ಟವಾಯಿತು :)

    ReplyDelete
    Replies
    1. ಇಲ್ಲಿಗೆ ಸ್ವಾಗತ ಧನ್ಯವಾದಗಳು

      Delete
  5. ವಾಹ್ .....!! ಎಲ್ಲಾ ಸಾಲುಗಳು ಇಷ್ಟವಾಯಿತು.ಅದರಲ್ಲೂ ಕೊನೆಯ ಎರಡು ಸಾಲುಗಳು ಮನಕಲಕುವಂತಿವೆ.ಹೀಗೆ ಬರೆಯುತ್ತಿರಿ.:-)
    लोग पूछे "क्यों आसूँ बहा रहीं हो ?"
    हम बोले "बस अरमानों की अर्थी निकल रहीं हैं "

    ReplyDelete
  6. ವಾಹ್ .....!! ಎಲ್ಲಾ ಸಾಲುಗಳು ಇಷ್ಟವಾಯಿತು.ಅದರಲ್ಲೂ ಕೊನೆಯ ಎರಡು ಸಾಲು ಮನಕಲಕುವಂತಿವೆ.ಹೀಗೆ ಬರೆಯುತ್ತಿರಿ.:-)

    ReplyDelete
    Replies
    1. ಧನ್ಯವಾದಗಳು, ಇಲ್ಲಿಗೆ ಸ್ವಾಗತ

      Delete
    2. ಇಲ್ಲಿಗೆ ಸ್ವಾಗತ ಧನ್ಯವಾದಗಳು

      Delete