ಹೊನಲ ಹಾಡು, ಹೆಸರೇ ಸುಂದರ. ಗೋಕುಲ ನಿರ್ಗಮನದಂಥ
ಕಾವ್ಯ ಸೃಷ್ಟಿಸಿದ ಪು.ತಿ.ನ.ರಿಗೆ ಬಹುಶ ಇದು ಸುಲಭ ಸಾಧ್ಯ.
ಆಕೆ ಪಾಠ ಮಾಡುತ್ತಿದ್ದ ರೀತಿಯೂ ಅಧ್ಬುತ. ಈಗ ಈ ಪದ್ಯಕ್ಕೆ ಅವರು ಕೊಟ್ಟ ವಿವರಣೆ
ನೆನಪಿಲ್ಲ ಆದರೆ ಸ್ಕೂಲಲ್ಲಿ ನಾ ಓದಿದ ಪದ್ಯಗಳಲ್ಲಿ ಮೊದಲು ನೆನಪಾಗೋದು ಈ ಪದ್ಯ.
ಇಂದು ಈ ಪದ್ಯ ಓದಿದಾಗ ಅನಿಸಿದ್ದು :
ಎಷ್ಟೊಂದು ಕನಸುಗಳು ನನ್ನ ಬಾಳ ಪಯಣದಲ್ಲಿ,
ಹುಟ್ಟುತ್ತಲೇ ಅಪ್ಪ ಅಮ್ಮನ ಕನಸು,
ನಯ ನಾಜೂಕು ಕಲಿ,
ಒಪ್ಪ ಓರಣ ಕಲಿ,
ಹಸೆ ಹಾಡು ರಂಗೋಲಿ ಕಲಿ,
ಆಮೇಲೆ ಹಾಡಿ ನಲಿ.
ಆಮೇಲೆ ಗಂಡನ ಕನಸು,
ಸುಂದರವಾಗಿರು, ನನ್ನ ನೆಲೆಯ ಹಂದರವಾಗಿರು,
ನನ್ನ ಮನದ ದುಗುಡ ದುಮ್ಮಾನ ಕಳೆವ ಸಖಿಯಾಗಿರು,
ನನ್ನ ಕುರುಹುಗಳ ಭುವಿಗೆ ತರುವ ರಥವಾಗಿರು,
ನನ್ನ ಗರ್ವದ ಪ್ರಮುಖ ಭಾಗವಾಗಿರು.
ಮತ್ತೆ ಬಂದದ್ದು ನನ್ನದೇ ಕಂದನ ಕನಸು,
ಹಸಿವೆಗೆ ತಾಯಾಗು,
ನನ್ನ ಮೊದಲ ಗೆಳತಿಯಾಗು,
ಲೋಕತೋರ್ವ ಗುರುವಾಗು,
ರೆಕ್ಕೆ ಬಲಿತಾಗ ನನ್ನ ಸ್ವತಂತ್ರವಾಗು.
ಎಲ್ಲರ ಕನಸ ಹೊತ್ತ ನನ್ನ ಕನಸೆಲ್ಲಿ?
ಹೊನಲ ಹಾಡು
ಸ್ಥವಿರಗಿರಿಯ ಚಲನದಾಸೆ ಮೂಕವನದ ಗೀತದಾಸೆ
ಸೃಷ್ಠಿಹೊರೆಯ ಹೊತ್ತ ತೆರೆಯ ನಗಿವಿನಾಸೆ ನಾ
ಬಾಳ್ವೆಗೆಲ್ಲ ನಾನೇ ನೆಚ್ಚು ಲೋಕಕೆಲ್ಲ ಅಚ್ಚು ಮೆಚ್ಚು
ನಾನೇ ನಾನೇ ವಿಧಿಯ ಹುಚ್ಚು ಹೊನಲ ರಾಣಿ ನಾ
ಕಿರಣ ನೇಯ್ದ ಸರಿಗೆಯುಡಿಗೆ ಇರುಳು ಕೊಟ್ಟ ತಾರೆತೊಡಿಗೆ
ಇಂದು ಕಳೆಯೊ ಹೂವಮುಡಿಗೆ ದೇವಕನ್ಯೆ ನಾ
ಬೆಳ್ಳಿ ನೊರೆಯ ನಗೆನಗುತ್ತ ತೆರೆಯ ನೆರೆಯ ಚಿಮುಕಿಸುತ್ತ
ಕಡಲ ವರಿಸೆ ತವಕಿಸುತ್ತ ನಡೆವ ವಧುವೆ ನಾ
ಸ್ಥವಿರಗಿರಿಯ ಚಲನದಾಸೆ ಮೂಕವನದ ಗೀತದಾಸೆ
ಸೃಷ್ಠಿಹೊರೆಯ ಹೊತ್ತ ತೆರೆಯ ನಗಿವಿನಾಸೆ ನಾ
ನಲಿತ ಕುಣಿತವೆನ್ನ ಶೀಲ ಚಲನವೆನ್ನ ಜೀವಾಳ
ಲುಪ್ತಮಾಗಿದೇಶಕಾಲ ಎನ್ನ ಗಾಯನ
ದಡದ ಗಿಡಕೆ ಪುಷ್ಪಹಾಸ ಸನಿಯದೆಡೆಗೆ ಸಸ್ಯಹಾಸ
ಹಾಸ ಕೀರ್ಣ ಹಾಸ ಪೂರ್ಣ ಎನ್ನ ಜೀವನ
ಸ್ಥವಿರಗಿರಿಯ ಚಲನದಾಸೆ ಮೂಕವನದ ಗೀತದಾಸೆ
ಸೃಷ್ಠಿಹೊರೆಯ ಹೊತ್ತ ತೆರೆಯ ನಗಿವಿನಾಸೆ ನಾ
ನಾನು ನಿಲ್ವುದೊಂದೆ ಕ್ಷಣಂ ಸತತ ಕರ್ವವೆನ್ನ ಗುಣಂ
ಅದಕೆ ಕಾಣೆ ಗೋಳನೆಣಂ ಹರ್ಷವೆನಗೆ ಚಿರಂತನಂ
ಗವಿಗಳಲ್ಲಿ ಉಳ್ಳನಡಗಿ ಬಂಡೆ ಮೇಲೆ ಹವ್ವನೆರಗಿ
ಮಡುವಿನಿಂದ ಮೆಲ್ಲನೆ ಜರುಗಿ ಕಡಲಿಗೊಡುವೆ
ಸ್ಥವಿರಗಿರಿಯ ಚಲನದಾಸೆ ಮೂಕವನದ ಗೀತದಾಸೆ
ಸೃಷ್ಠಿಹೊರೆಯ ಹೊತ್ತ ತೆರೆಯ ನಗಿವಿನಾಸೆ ನಾ
ಅಚರ ಜಗದ ಚಲನದಾಸೆ ಮೂಕ ಜಗದ ಜೀವದಾಸೆ
ನೀತಿ ನಿಯಮ ನಿಯತ ಜಗದ ನಗುವಿನಾಸೆ ನಾ
ಮನ ವಿನೋದ ಮಲೆಯ ಮೋದ ಮುಗಿಲಮೇಲ್ಮೆ ನಾಡ ನಲ್ಮೆ
ನಾನೇ ನಾನೇ ಇವನ ಒಲ್ಮೆ ಹೊನಲ ರಾಣಿ ನಾ
ನಾನೇ ನಾನೇ ಇವನ ಒಲ್ಮೆ ಹೊನಲ ರಾಣಿ ನಾ
ಕಾವ್ಯ ಸೃಷ್ಟಿಸಿದ ಪು.ತಿ.ನ.ರಿಗೆ ಬಹುಶ ಇದು ಸುಲಭ ಸಾಧ್ಯ.
ಏಳನೇ ತರಗತಿಯ, ಕನ್ನಡ ಪಟ್ಯ ಭಾಗವಾಗಿತ್ತು,ಈ ಪದ್ಯ.
ನಮ್ಮ ಪ್ರೇಮ ಮಿಸ್ ಎಲ್ಲ ಪದ್ಯಗಳನ್ನು ರಾಗವಾಗಿ ಹೇಳಿ ಕೊಡುತ್ತಿದ್ದರುಆಕೆ ಪಾಠ ಮಾಡುತ್ತಿದ್ದ ರೀತಿಯೂ ಅಧ್ಬುತ. ಈಗ ಈ ಪದ್ಯಕ್ಕೆ ಅವರು ಕೊಟ್ಟ ವಿವರಣೆ
ನೆನಪಿಲ್ಲ ಆದರೆ ಸ್ಕೂಲಲ್ಲಿ ನಾ ಓದಿದ ಪದ್ಯಗಳಲ್ಲಿ ಮೊದಲು ನೆನಪಾಗೋದು ಈ ಪದ್ಯ.
ಇಂದು ಈ ಪದ್ಯ ಓದಿದಾಗ ಅನಿಸಿದ್ದು :
ಎಷ್ಟೊಂದು ಕನಸುಗಳು ನನ್ನ ಬಾಳ ಪಯಣದಲ್ಲಿ,
ಹುಟ್ಟುತ್ತಲೇ ಅಪ್ಪ ಅಮ್ಮನ ಕನಸು,
ನಯ ನಾಜೂಕು ಕಲಿ,
ಒಪ್ಪ ಓರಣ ಕಲಿ,
ಹಸೆ ಹಾಡು ರಂಗೋಲಿ ಕಲಿ,
ಆಮೇಲೆ ಹಾಡಿ ನಲಿ.
ಆಮೇಲೆ ಗಂಡನ ಕನಸು,
ಸುಂದರವಾಗಿರು, ನನ್ನ ನೆಲೆಯ ಹಂದರವಾಗಿರು,
ನನ್ನ ಮನದ ದುಗುಡ ದುಮ್ಮಾನ ಕಳೆವ ಸಖಿಯಾಗಿರು,
ನನ್ನ ಕುರುಹುಗಳ ಭುವಿಗೆ ತರುವ ರಥವಾಗಿರು,
ನನ್ನ ಗರ್ವದ ಪ್ರಮುಖ ಭಾಗವಾಗಿರು.
ಮತ್ತೆ ಬಂದದ್ದು ನನ್ನದೇ ಕಂದನ ಕನಸು,
ಹಸಿವೆಗೆ ತಾಯಾಗು,
ನನ್ನ ಮೊದಲ ಗೆಳತಿಯಾಗು,
ಲೋಕತೋರ್ವ ಗುರುವಾಗು,
ರೆಕ್ಕೆ ಬಲಿತಾಗ ನನ್ನ ಸ್ವತಂತ್ರವಾಗು.
ಎಲ್ಲರ ಕನಸ ಹೊತ್ತ ನನ್ನ ಕನಸೆಲ್ಲಿ?
ಇವರೆಲ್ಲರೇ ನನ್ನ ಕನಸಲ್ಲವೇ?
ನೀತಿ ನಿಯಮ ನಿಯತ ಜಗದ ನಗುವಿನಾಸೆ ನಾ :-)
ನೀತಿ ನಿಯಮ ನಿಯತ ಜಗದ ನಗುವಿನಾಸೆ ನಾ :-)
ಹೊನಲ ಹಾಡು
ಸ್ಥವಿರಗಿರಿಯ ಚಲನದಾಸೆ ಮೂಕವನದ ಗೀತದಾಸೆ
ಸೃಷ್ಠಿಹೊರೆಯ ಹೊತ್ತ ತೆರೆಯ ನಗಿವಿನಾಸೆ ನಾ
ಬಾಳ್ವೆಗೆಲ್ಲ ನಾನೇ ನೆಚ್ಚು ಲೋಕಕೆಲ್ಲ ಅಚ್ಚು ಮೆಚ್ಚು
ನಾನೇ ನಾನೇ ವಿಧಿಯ ಹುಚ್ಚು ಹೊನಲ ರಾಣಿ ನಾ
ಕಿರಣ ನೇಯ್ದ ಸರಿಗೆಯುಡಿಗೆ ಇರುಳು ಕೊಟ್ಟ ತಾರೆತೊಡಿಗೆ
ಇಂದು ಕಳೆಯೊ ಹೂವಮುಡಿಗೆ ದೇವಕನ್ಯೆ ನಾ
ಬೆಳ್ಳಿ ನೊರೆಯ ನಗೆನಗುತ್ತ ತೆರೆಯ ನೆರೆಯ ಚಿಮುಕಿಸುತ್ತ
ಕಡಲ ವರಿಸೆ ತವಕಿಸುತ್ತ ನಡೆವ ವಧುವೆ ನಾ
ಸ್ಥವಿರಗಿರಿಯ ಚಲನದಾಸೆ ಮೂಕವನದ ಗೀತದಾಸೆ
ಸೃಷ್ಠಿಹೊರೆಯ ಹೊತ್ತ ತೆರೆಯ ನಗಿವಿನಾಸೆ ನಾ
ನಲಿತ ಕುಣಿತವೆನ್ನ ಶೀಲ ಚಲನವೆನ್ನ ಜೀವಾಳ
ಲುಪ್ತಮಾಗಿದೇಶಕಾಲ ಎನ್ನ ಗಾಯನ
ದಡದ ಗಿಡಕೆ ಪುಷ್ಪಹಾಸ ಸನಿಯದೆಡೆಗೆ ಸಸ್ಯಹಾಸ
ಹಾಸ ಕೀರ್ಣ ಹಾಸ ಪೂರ್ಣ ಎನ್ನ ಜೀವನ
ಸ್ಥವಿರಗಿರಿಯ ಚಲನದಾಸೆ ಮೂಕವನದ ಗೀತದಾಸೆ
ಸೃಷ್ಠಿಹೊರೆಯ ಹೊತ್ತ ತೆರೆಯ ನಗಿವಿನಾಸೆ ನಾ
ನಾನು ನಿಲ್ವುದೊಂದೆ ಕ್ಷಣಂ ಸತತ ಕರ್ವವೆನ್ನ ಗುಣಂ
ಅದಕೆ ಕಾಣೆ ಗೋಳನೆಣಂ ಹರ್ಷವೆನಗೆ ಚಿರಂತನಂ
ಗವಿಗಳಲ್ಲಿ ಉಳ್ಳನಡಗಿ ಬಂಡೆ ಮೇಲೆ ಹವ್ವನೆರಗಿ
ಮಡುವಿನಿಂದ ಮೆಲ್ಲನೆ ಜರುಗಿ ಕಡಲಿಗೊಡುವೆ
ಸ್ಥವಿರಗಿರಿಯ ಚಲನದಾಸೆ ಮೂಕವನದ ಗೀತದಾಸೆ
ಸೃಷ್ಠಿಹೊರೆಯ ಹೊತ್ತ ತೆರೆಯ ನಗಿವಿನಾಸೆ ನಾ
ಅಚರ ಜಗದ ಚಲನದಾಸೆ ಮೂಕ ಜಗದ ಜೀವದಾಸೆ
ನೀತಿ ನಿಯಮ ನಿಯತ ಜಗದ ನಗುವಿನಾಸೆ ನಾ
ಮನ ವಿನೋದ ಮಲೆಯ ಮೋದ ಮುಗಿಲಮೇಲ್ಮೆ ನಾಡ ನಲ್ಮೆ
ನಾನೇ ನಾನೇ ಇವನ ಒಲ್ಮೆ ಹೊನಲ ರಾಣಿ ನಾ
ನಾನೇ ನಾನೇ ಇವನ ಒಲ್ಮೆ ಹೊನಲ ರಾಣಿ ನಾ
No comments:
Post a Comment