Thursday, August 18, 2011

Random thoughts

೧. ಕಂಬನಿ ಇಂದ ಕಣ್ಣು ಮಂಜಾದಿತೇನೋ ,
ಮಂಜಾದ ಕಣ್ಣಲ್ಲಿ ಚೆಲುವ ಕಾಣಿಸಲಾರನೋ ಎಂದು,
ಕಣ್ಣಿರ  ಒತ್ತಿ ಹಿಡಿದು ಕುಂತಿದ್ದಾಳೆ ಚೆಲುವಿ.
ಅವ ಮರೆತ ದಾರಿಯನ್ನ ನೆನಪು ಮಾಡಿ ಕೊಡುವವರಾರು !

೨. ತುತ್ತಿಗಾಗಿ  ಹೋರಾಡ   ಬೇಕು  
ಹಕ್ಕಿಗಾಗಿ 
ಹೋರಾಡ  ಬೇಕು
ಉಸಿರಿರುವವರೆಗಿನ ಹೋರಾಟ ಬದುಕು

ಹಸಿವಿಗಾಗಿ ದುಡಿಯ ಬೇಕು

 ಕಸುವಿಗಾಗಿ ದುಡಿಯಬೇಕು
ದಣಿಯುವವರೆಗಿನ ದುಡಿತ ಬದುಕು

ಲುಮೆಗಾಗಿ     ಪ್ರೀತಿಸಬೇಕು 
ನೆನಪಿಗಾಗಿ  ಪ್ರೀತಿಸಬೇಕು
ಹೊರಡುವತನಕದ  ಪ್ರೀತಿ    ಬದುಕು
 

ಇದೆಲ್ಲದರಿಂದ   ಮುಕ್ತವಾಗುವ   ಸತ್ಯದ  ಹುಡುಕಾಟವೂ  ಬದುಕು  !

2 comments:

  1. ಚೆನ್ನಾಗಿದೆ !!!... "ಸತ್ಯದ ಹುಡುಕಾಟವು ಬದುಕು" ಎಂಬ ಸಾಲು ತುಂಬ ಹಿಡಿಸಿತು...

    ReplyDelete