Tuesday, August 30, 2011

ತವರಿಗೆ ಬಾ ಗೌರಿ

ಗೌರಿ ಗಣಪತಿ ಹಬ್ಬ ನನ್ನ ಫೇವರಿಟ್ ಹಬ್ಬ.   ಗೌರಮ್ಮ (ಅಮ್ಮ ಗೌರಿಯನ್ನ ಹಾಗೆ ಕರೆಯೋದು),
ಪ್ರತಿವರ್ಷ ತೌರಿಗೆ ಬರ್ತಾಳಂತೆ.  ಬರುವಾಗಲೇ,  ಶಿವನ ಆಜ್ಞೆಯಂತೆ ೩ ದಿನ, ೫ ದಿನ  ತಪ್ಪಿದರೆ ೭ ದಿನ ಮಾತ್ರ
ನಿನ್ನ ತವರಿನ ಸವಾರಿ ಅಂತ. ಅದಕ್ಕೆ ಗೌರಮ್ಮನ್ನ ಏಳು ದಿನಕ್ಕಿಂತ ಹೆಚ್ಚು ಇಟ್ಟು ಕೊಳಲ್ವಂತೆ. ಇಷ್ಟು ಸಾಲದು ಅಂತ
ಶಿವ, ನಿಮ್ಮಮ್ಮ ತವರಿಗೆ ಹೋಗಿ ನಮ್ಮನೆ ಮರೆತಾಳು ಎಂದು, ಗಣಪನನ್ನ ಅಮ್ಮನ ಹಿಂದೆ ಕಳಿಸಿದನಂತೆ ಅದಕ್ಕೆ
ಗೌರಮ್ಮನ ಮರುದಿನ ಗಣಪತಿ ಬರ್ತಾನಂತೆ. ಎಷ್ಟು ಚಂದದ ಕಥೆ (?)

ತವರಿಗೆ ಬಂದ ಮಗಳು ಸುಖವಾಗಿರಲಿ
ತಾಯ ಕರೆಯಲು ಬಂದ ಗಣಪ ವಿಘ್ನ ಹರಿಸಲಿ

No comments:

Post a Comment