Wednesday, August 17, 2011

ದೇವರೊಂದಿಗಿನ ಬದುಕು.


ಹುಡುಗಿ ಮದುವೆಯಾಗಿ ಗಂಡನ ಮನೆಗೆ(?)  ಬಂದಳು.
ಅತ್ತೆ ಮಾವ, ಗಂಡ, ನೆಂಟರಿಷ್ಟರು ಎಲ್ಲರು ಒಳ್ಳೆಯವರೇ.
ಅತ್ತೆ ಮಾವನಿಗಂತೂ ಸರೀಕರಲ್ಲಿ ದೇವರಂತವರು (ಕೆಲವರ ಪ್ರಕಾರ  ದೇವರೇ! ) ಎಂಬ ಹೆಸರಿದೆ.
ಆದರೆ ದೇವರು ಗಳೊಂದಿಗೆ ಬದುಕುವುದೆಂತು?

ಬೇರೆ ಊರಿನಲ್ಲಿದ್ದ ಅತ್ತೆ ಮಾವ ಮಗಳ ಮಗುವಿನೊಂದಿಗೆ ಮೊದಲ ಬಾರಿ ಮಗನ ಮನೆಗೆ ಬಂದಿದ್ದಾರೆ.
ಅತ್ತೆ ಮಾವ ನಾದಿನಿ ಮತ್ತು ಮಗು ಆಟೋ ಇಳಿದರು. ಅತ್ತೆ ಮಗಳಿಗೆ ಬಾಗಿಲಲ್ಲಿ ನಿಲ್ಲುವಂತೆ ಹೇಳಿ ನೇರ ಒಳ ಬಂದವರೇ ಕೈ ಕಾಲು ತೊಳೆದು, ದೇವರ ಮುಂದೆ ಇಟ್ಟಿದ್ದ ತಟ್ಟೆಯಲ್ಲಿ ಮಗುವಿಗೆ ರಕ್ಷೆ ಇಡಲು ಆರತಿ ತಯಾರಿ ಮಾಡಿ, ಆರತಿಯನ್ನು ಮಾಡಿ ಮಗಳನ್ನು ಒಳ ಕರೆಯುತ್ತಾರೆ. ಸೊಸೆ ಪ್ರೇಕ್ಷಕಿ ಮಾತ್ರ.

ಸಮಾರಂಭಗಳಿಗೆ ಹೋದರೆ, ಅತ್ತೆ ಮಾವನ ಜೊತೆ ಏನಿಲ್ಲವೆಂದರೂ ಐದು ಜನ ಮನೆಗೆ ಬರುತ್ತಾರೆ.
 ಗಲಾಟೆ ಗೌಜು, ಮಾತು ಎಲ್ಲವೂ ಚೆನ್ನಾಗಿಯೇ ನಡೆಯುತ್ತದೆ. ಅದ್ಯಾವುದೋ ಮೂಲೆಯಲ್ಲಿ ಸೊಸೆಯೂ ಪ್ರೇಕ್ಷಕಿಯಾಗಿ ಕುಲಿತಿರುತ್ತಾಳೆ  . ಎಲ್ಲ ಮುಗಿದು ನೆಂಟರು ಹೊರಟರೆ ಅತ್ತೆ ಸಂಭ್ರಮದಿಂದ ಕುಂಕುಮ , ತಾಂಬೂಲಕ್ಕೆಂದು ಕಾಣಿಸಿದ ಹಣ್ಣು ಕಾಯಿ ಎಲ್ಲ  ಕೊಡುತ್ತಾರೆ. ಎಲ್ಲದಕ್ಕೂ ಸೊಸೆ, ಮತ್ತೆ  ಪ್ರೇಕ್ಷಕಿ ಮಾತ್ರ.

ಅದಾವುದೋ ಹಬ್ಬಕ್ಕೆ ಸೊಸೆ ಸಂಭ್ರಮದಿಂದ ಬೇಗ ಎದ್ದು ಪೂಜೆ ಮಾಡುತ್ತಾಳೆ. ದಿನವೂ ಪೂಜೆ ಮಾಡುವ ಮಾವನಿಗೆ ಕಿರಿ ಕಿರಿ ದೇವರ ಮುಂದೆ ನಿಂತು ಹೆಂಡತಿಗೆ ಹೇಳುತ್ತಾರೆ " ಈ ದೇವರ ದಿಕ್ಕು ಸರಿ ಇಲ್ಲ " "ಆ ದೇವರಿಗೆ ಈ ಹೂ ಇಡ ಬಾರದು",
ಕೆಲ ಕಾಲ ಯೋಚಿಸಿ ಎಲ್ಲ sari (?) ಮಾಡುತ್ತಾರೆ. ಮತ್ತೆ ಸೊಸೆಗೆ ಅದೇ ಪಾತ್ರ...ಪ್ರೇಕ್ಷಕಿ

ಯಾರು ಸರಿ ಎಂಬ ಪ್ರಶ್ನೆಗಿಲ್ಲಿ ಅವಕಾಶವಿಲ್ಲ. ಮೂವತ್ತು ವರ್ಷ ಮನೆಯನ್ನು ನನ್ನಂತೆಯೇ ನಡಿಸಿದ್ದೇನೆ, ಮಗನ ಇಷ್ಟೆತ್ತರಕ್ಕೆ ಬೆಳಿಸಿದ್ದೇನೆ , ಮನೆಯ ಹಿರಿಯಳು ನಾನು ಆದ್ದರಿಂದ ಮನೆಯ ಹಕ್ಕು ನನ್ನದು ಎಂಬುದು ಅತ್ತೆಯ ಅಂಬೋಣ. ಹೊಸ ಮನೆಯ ಕನಸಿನೊಂದಿಗೆ ಬಂದಿದ್ದೇನೆ, ಇದು ನನ್ನ ಮಾತು ನನ್ನ ಗಂಡನ ಮನೆ, ಆದ್ದರಿಂದ ಇಲ್ಲಿ ನಾ ಹೇಳಿದ್ದು ಸರಿ ಅನ್ನುವುದು ಸೊಸೆಯ ವಾದ.

ಅತ್ತೆ ಮಾವ ಕ್ರೂರಿಗಳೆಂದು ಹೇಳಲಾಗದು. ಆದರೆ ಇಂಥ ಹಿಂಸೆಗಳನ್ನ ಯಾರಲ್ಲಿ ಹೇಳೋದು? ಹಕ್ಕುಗಳಿಗಾಗಿ ನಡೆಯುವ ಈ ಹೋರಾಟಕ್ಕೆ ಕೊನೆ ಎಂದು?

2 comments:

  1. ನಮಸ್ತೆ, ನಿಮ್ಮ ತಾಣಕ್ಕೆ ಮೊದಲ ಭೇಟಿ. ಸ೦ಸಾರದ ವಾಸ್ತವ ಚಿತ್ರಣವನ್ನು ತಿಳಿಸಿದ್ದೀರಿ. ಪಾತ್ರಗಳ ವಿಶ್ಲೇಷಣೆಯನ್ನು ಮಾಡುವುದು ಸುಲಭವಲ್ಲ. ತ್ಯಾಗ ಎನ್ನುವ ದೊಡ್ಡಮಾತಿನಲ್ಲೂ ಒಡಕ ದನಿ ಇರುತ್ತದೆ. ಎಲ್ಲಿಯೂ ಅಳತೆ ಮೀರದ೦ತೆ ಸಾಮರಸ್ಯ ಮೂಡಿಸಿಕೊಳ್ಳುವ ಹೋರಾಟ ಕೂಡ ಬದುಕಿನ ಒ೦ದು ಅ೦ಗ ಎನಿಸುತ್ತದೆ. ಉತ್ತಮ ವಿಚಾರಧಾರೆಗೆ ಅಭಿನ೦ದನೆಗಳು.

    ಅನ೦ತ್

    ReplyDelete
  2. ತಾವು ಹೇಳಿದ್ದು ಸರಿ ಸರ್.
    ಧನ್ಯವಾದಗಳು.

    ನಿಮ್ಮ ಬ್ಲಾಗನ್ನು ನಾನು ಆಗಾಗ ಓದಿದ್ದೇನೆ. ಚೆನ್ನಾಗಿದೆ.
    ಗಮಕ ಪಾಠದಲ್ಲಿ ಹರಿಕಥಾಮೃತಸಾರದ ಕೆಲವು ಪದ್ಯಗಳನ್ನು
    ಓದ್ದಿದ್ದೆ. ಈಗ ತಮ್ಮ ಬ್ಲಾಗಿನಲ್ಲಿ ಅವುಗಳನ್ನು ಓದಿ ಅರ್ಥ ಮಾಡಿಕೊಳ್ಳುವುದು ಖುಷಿ ಎನಿಸುತ್ತದೆ.

    ReplyDelete