Friday, May 11, 2012

ರೋಡಲ್ಲೊಂದು ಕ್ಲಾಸು

ಯಾಕೋ ಅವನ ನೆನಪು ಮತ್ತೆ ಹಿತ ಎನಿಸುತಿತ್ತು.
ಆ ದಿನ ನಾನವನೊಡನೆ ಮಾತಾಡಿದ್ದನ್ನ ಯಾರೋ ಗೆಳತಿ
ನೋಡಿ ಯಾರು? ಎತ್ತ?   ಅಂತ ಕೇಳಿದಳು. ಹಾಗೆ ಪರಿಚಯ ಅಂತ
ಸುಮ್ಮನಾದೆ.  ಹದಿ ಹರೆಯದ ಹಸಿ ಸುಳ್ಳು. ಹೇಳಿದವರಿಗೂ ಗೊತ್ತು
ಕೇಳಿದವರಿಗೂ, ಆದರೂ ಹರಿಯುತ್ತಲೇ ಇದೆ ಮಿಥ್ಯ ವಾಹಿನಿ .

ನಮ್ ಕಾಲೇಜಿಗೆ ಯುನಿಫಾರ್ಮ್  ಇರಲಿಲ್ಲ, ಅವನ ಕಾಲೆಜಿಗಿತ್ತು  . ದಿನವೂ ಸಿಂಗರಿಸಿಕೊಳ್ಳುವಾಗ
ಹುಡುಕುತ್ತಿದ್ದೆ ಅವನ ಕಂಗಳನ್ನ. ಕಾಲೇಜಿನ ರೋಡಿನ ತುಂಬಾ ಮರಗಳು ಅಲ್ಲಿ ಕೂಗುವ ಥರ ಥರ
ಹಕ್ಕಿಗಳು. ಅವನ ನಗುವೇ ಕಾಣುತಿತ್ತು ಎಲ್ಲ ಮರಗಳಲ್ಲಿ, ಅವನ ದನಿಯೇ ಕೇಳುತಿತ್ತು ಎಲ್ಲ ಹಕ್ಕಿಗಳಿಂದ.
"वो पंची प्यारे , सांज सतारे बोली तू कौन सी बोली  बतारे "(ಗುಲ್ಜಾರ್  - ಬಂಧಿನಿ)

ಕಾಲೇಜಿನಲ್ಲಿ ಬೇಡವೆನಿಸಿದ ಕ್ಲಾಸ್ಗಳನ್ನ ಬಂಕ್ ಮಾಡುವ ಸ್ವತಂತ್ರ(?) ನಮಗಿತ್ತು, ಅವನ ಕಾಲೆಜಿನಲ್ಲಿರಲಿಲ್ಲ.
ಹಾಗೆ ಒಂದು ದಿನ ಕೆಮಿಸ್ಟ್ರಿ ಕ್ಲಾಸ್ ಬಂಕ್ ಮಾಡಿ ಗೆಳತಿಯರೆಲ್ಲ ಗುಂಪಲ್ಲಿ ಹೊರ ಹೋದ್ವಿ.  ದುಡ್ಡಿದ್ದವರೆಲ್ಲ ಅಲ್ಲೇ ಇದ್ದ  ಸಣ್ಣ ಹೋಟೆಲಿಗೆ ಹೋದರು. ನಾನು ಸುಮ್ಮನೆ ಮರದಲ್ಲಿರುವ ಮೈನಾಗಳನ್ನ ನೋಡುತ್ತಾ ನಿಂತಿದ್ದೆ.


ಇಷ್ಟೆಲ್ಲಾ ಪೀಠಿಕೆ ಇತ್ತ ಮೇಲೆ ಅವ ಬರ ಬೇಕಲ್ಲವೇ? ಬಂದ.
"ಏನು ಕ್ಲಾಸ್ ಬಂಕ್ ಮಾಡಿದ್ಯಾ?"
"ಹೂಂ"
"ಯಾರ ಕ್ಲಾಸು?"
ಮೇಷ್ಟ್ರ ಹೆಸರು ಹೇಳಿದೆ.
"ಒಹ್.... ತೊಗೋ notes . ಮತ್ತೆ ನಿನ್ನ ಪರೀಕ್ಷೆ ಮುಗಿದ ಮೇಲೆ ಕೊಡು ನಂಗೆ ಸಿಇಟಿಗೆ ಬೇಕು"
"ಸರಿ"
"ಜಾಸ್ತಿ ಬಂಕ್ ಮಾಡ್ಬೇಡ" (ನಗು)
ನಗು.
" इन रेशिमी राहों में एक राह तो वोह होगी,
तुम तक जो पोहुन्चती हैं " (ಗುಲ್ಜಾರ್ - ಆಂಧಿ)

4 comments:

  1. Teenage romance ಅನ್ನು ಯಥಾವತ್ತಾಗಿ ಚಿತ್ರಿಸಿದ್ದೀರಿ. ಹುಡುಗಿಯರ ಅಂತರಂಗಕ್ಕೆ ಒಳ್ಳೆ ಕನ್ನಡಿಯಂತಿದೆ ನಿಮ್ಮ ಕತೆ! ಗುಲಜಾರರ ಗೀತೆಗಳು ಯಥೋಚಿತವಾಗಿವೆ.

    ReplyDelete
  2. ಧನ್ಯವಾದಗಳು ಗುರುಗಳಿಗೆ

    ReplyDelete
  3. ಮಿಥ್ಯ ವಾಹಿನಿ.....ಅಬ್ಬಬ್ಬಾ...:-)

    ReplyDelete
  4. ಧನ್ಯವಾದಗಳು ಸರ್

    ReplyDelete