Thursday, May 31, 2012

ನೋಟ್ಸ್- ಸಸ್ಪೆನ್ಸ್

ಅವನ ಸೆಕೆಂಡ್ ಪಿಯು ಪರೀಕ್ಷೆ ಶುರುವಾಗುವುದರಲ್ಲಿತ್ತು.  ಪೂರ್ವತಯಾರಿ ಪರೀಕ್ಷೆ ಮುಗಿದ ಮೇಲೆ
ಕಾಲೇಜಿನ ಹತ್ತಿರ ಒಮ್ಮೆ ಕಂಡ, ನಿಲ್ಲಲಿಲ್ಲ. ಈ ಬಾರಿ ನಾನು ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ.
ಪರೀಕ್ಷೆ ನಡೆಯೋವಾಗ ಅವ ನಿಲ್ಲದೇ  ಇರೋದು, ಮಾತಾಡದೆ ಇರೋದು ಒಂಥರಾ ಅಭ್ಯಾಸ ಆಗಿತ್ತು.

ಅವನ ಪರೀಕ್ಷೆಗೂ ಮುಂಚೆ ನಮ್ಮದು ಮುಗಿಯಿತು. ಫಸ್ಟ್ ಪಿಯು ಅಂತ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ.
ಆದರೆ ಆಮೇಲೆ ತಲೆ ಕೆಡಿಸಿಕೊಂಡಿದ್ದು, ಅವನ ನೋಟ್ಸ್  ಬಗ್ಗೆ.  ಪೂರ್ವತಯಾರಿ ಪರೀಕ್ಷೆಗೂ ಮುನ್ನ ಅವ ಕೇಳಲಿಲ್ಲ,
ನನಗೂ ನೆನಪಿರಲಿಲ್ಲ.  ನಾ ನನ್ನ ಪರೀಕ್ಷೆಗೆ ಓದುವಾಗ, ನೋಟ್ಸ್ ತೆಗೆದಾಗಲೇ ಅವನ  ಫಸ್ಟ್ ಪಿಯು ನೋಟ್ಸ್ ಎಲ್ಲಾ ನನ್ನ
ಬಳಿ ಇದೆ ಅಂತ ಜ್ಞಾನೋದಯವಾಗಿದ್ದು.  ಪಿಯು ಪರೀಕ್ಷೆ ಮುಗಿಯಿತು. ನನ್ನ ಸಮಸ್ಯೆ ಬಗೆ ಹರಿದಿರಲಿಲ್ಲ. ಸಿಇಟಿಗೆ ಇನ್ನು ಕೆಲವೇ ದಿನಗಳಿದ್ದವು.
"ನಿನ್ನ ಸವಿ ನೆನಪೇ ಮನದಲ್ಲಿ ಆರಾಧನೆ"

ಅಮ್ಮ ಒಂದಿನ ಅಚಾನಕ್ಕಾಗಿ  ಬಂದು ನಿನ್ನ ಫಸ್ಟ್ ಪಿಯು ನೋಟ್ಸ್ ಕೊಡು ಅಂದರು . ಅವರ ಪರಿಚಯಸ್ಥರ ಮಗನಿಗೆ ಸಿಇಟಿಗೆ ಬೇಕು ಅಂತ. ಸರಿ ಅಂದ್ಕೊಂಡು ಸುಮ್ಮನಾದೆ. ಅಮ್ಮನಿಗೆ ಬೆಳಗಾಗೆದ್ದು ಗುಡಿ ಸುತ್ತುವ ಚಟ. ಒಂಥರ ಮಾರ್ನಿಂಗ್ ವಾಕ್ ಕಂ ಪ್ರದಕ್ಷಿಣೆ .ಮಾರನೇ ದಿನ ಅಮ್ಮ ಬೆಳಿಗ್ಗೆ ಗುಡಿಯ ರೌಂಡ್ಸ್, ಮುಗಿಸಿ ಬಂದದ್ದೆ, "ನಿನ್ ಹತ್ರ ಆ ಕಾಲೇಜಿನ ನೋಟ್ಸ್ ಇದೆ ಅಂತಲ್ಲ ಕೊಡು" ಅಂತ ಅವನ ಕಾಲೇಜಿನ ಹೆಸರು ಹೇಳಿದ್ರು. ನಾನು ಫುಲ್ ಥಂಡಾ!.
ಆಮೇಲೆ ಹೇಳಿದ್ರು, ಅವರ ಫ್ರೆಂಡ್ ಮಗ ಹೇಳ್ದ, ಅವನಿಗೆ ಅವನ ಫ್ರೆಂಡ್ ಹೇಳಿದಳು ಅಂತ.  ಯಾರಪ್ಪ ಇದು ಅಮ್ಮನ ಫ್ರೆಂಡ್ ಮಗ, ಅವನ ಫ್ರೆಂಡ್ ಅಂತ ಫುಲ್ ತಲೆ ಕೆಟ್ಟಿತ್ತು.

ಮಾರನೇ ದಿನ ಕ್ಲೈಮಾಕ್ಸ್ , ಅಮ್ಮನ ಫ್ರೆಂಡ್ ಮಗ ಮನೆಗೆ ಬಂದ.  ಅವನನ್ನ ಇದುವರೆಗೂ ನಾ ನೋಡೇ ಇರ್ಲಿಲ್ಲ. ಅಮ್ಮನೇ ಪರಿಚಯ ಮಾಡಿಸಿ,ತಿಂಡಿ ತರಕ್ಕೆ, ಒಳಗೆ ಹೋದರು, ಆಗ ಬಾಯ್ಬಿಟ್ಟ ಆಸಾಮಿ, "ನಿನ್ ಹತ್ರ ಅವ್ನ ನೋಟ್ಸ್ ಇದೆ ಅಲ ಕೊಡು" ಅಂತ.  !  ಹೀಗೆ ಗೊತ್ತಾಗಿತ್ತು ನಮ್ಮ ಪರಿಚಯದಬಗ್ಗೆ, ಅವನ ಸ್ನೇಹಿತನಿಗೆ.

ಏನು ಹೇಳಿರಬಹುದು ನನ್ನ ಬಗ್ಗೆ? ಹೇಗೆ ಪರಿಚಯ ಅಂಥ ಹೇಳಿರಬಹುದು? ಅಂತೆಲ್ಲಾ ತಲೆ ಕೆಡಿಸ್ಕೊಂಡ್ರೂ ಯಾರನ್ನ ಕೇಳೋದು?ಅಮ್ಮನ  ಫ್ರೆಂಡ್ ಮಗ  ನೋಟ್ಸ್ ಇಸ್ಕೊಂಡು, ತಿಂಡಿ ತಿಂದು ಹೋದ. ಇನ್ನವನ  ಫ್ರೆಂಡ್   ಬಹುಶ ಪೂರ್ತಿ ಕುಡುಮಿಯಾಗಿ  ಬದಲಾಗಿದ್ದ.

"क्या जानू सजन होती हैं क्या ग़म की शाम ?
जल उठे सौ दिए, जब लिया तेरा नाम "


4 comments:

  1. ವಿಷಯ ಕುತೂಹಲಕಾರಿ ಘಟ್ಟವನ್ನು ತಲುಪಿದೆ.
    ಕೊನೆಯಲ್ಲಿರುವ ಹಾಡು (ಕ್ಯಾ ಜಾನೂ ಸನಮ್...) ತುಂಬ ಸುಂದರವಾದ ಹಾಡು, ಅಲ್ಲವೆ?

    ReplyDelete
  2. ಕೆಲ ತಾಕಲಾಟಗಳೇ ಹಾಗೆ, ಅವು ಅನುತ್ತರದ ನಿಮಿಷಗಳು. ಅವನು ನಿಮ್ಮನ್ನೇ ನೋಟ್ಸ್ ಕೇಳ ಬಹುದಿತ್ತು ಎಂದು ನನಗೂ ತೀವ್ರವಾಗಿ ಅನಿಸಿತು.

    ಕ್ಲೈಮ್ಯಾಕ್ಸಿಗೆ ನೀವು ಬರೆದ ಗೀತೆಯೂ ಸೂಪರ್ರೂ...

    ReplyDelete
  3. ಧನ್ಯವಾದಗಳು ಕಾಕಾ.
    ಬದರಿ ಸರ್, ಅವನೇನು ನನ್ನನ್ನ ಕೇಳೋದೇನು?
    ಇದು ಕಥೆಯಾದ ಪ್ರೀತಿ ಸರ್ :)
    ಪ್ರತಿಕ್ರಿಯೆಗಾಗಿ ಧನ್ಯವಾದಗಳು
    ಸ್ವರ್ಣಾ

    ReplyDelete
  4. ಲತಾರ ಸುಂದರ ಧ್ವನಿಯಲ್ಲಿ ಅಷ್ಟೇ ಸುಂದರ ಹಾಡು ಕಾಕ
    ಹೌದು. One of the immortal solos.

    ReplyDelete